ಕಿರಿಕ್ ಪಾರ್ಟಿ ನಂತರ ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಅವನೇ ಶ್ರೀಮನ್ನಾರಾಯಣ. ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೂ ಮುನ್ನವೇ ಸಾಕಷ್ಟು ನಿರೀಕ್ಷೆ, ಹೈಪ್ ಕ್ರಿಯೇಟ್ ಮಾಡಿರುವ ನಾರಾಯಣ ನಿನ್ನೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟರ್ ನಲ್ಲಿ ಶಾನ್ವಿ ಶ್ರೀವಾತ್ಸವ್ ಮಹಾಲಕ್ಷ್ಮಿ ಗೆಟಪ್ ನಲ್ಲಿ ಪ್ರತ್ಯಕ್ಷಳಾಗಿದ್ದಾರೆ. ಟೈಟಲ್ ಗೆ ತಕ್ಕಂತೆ ಶಾನ್ವಿ ಲಕ್ಷ್ಮಿಯ ಅವತಾರವೆತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
Our very own Lakshmi wishing you all a very happy Varamahalakshmi Festival. ಲಕ್ಷ್ಮಿ ಇದ್ದಲ್ಲಿ ನಾರಾಯಣ ಇರ್ಲೆ ಬೇಕಲ್ವ? ಹಾಗಾದ್ರೆ ಹುಡುಕಿ ನೋಡೋಣ! #AvaneSrimannarayana pic.twitter.com/f5ARTTk8iY
— Paramvah Studios (@ParamvahStudios) August 9, 2019
ಬಹುಭಾಷೆಗಳಲ್ಲಿ ಬಿಡುಗಡೆಗೆ ರೆಡಿಯಾಗಿರುವ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಉಳಿದವರು ಕಂಡಂತೆ ಚಿತ್ರತಂಡ ರಕ್ಷಿತ್ ಶೆಟ್ಟಿ ಪೊಲೀಸ್ ದಿರಿಸಿನಲ್ಲಿ ಅಬ್ಬರಿಸಲಿದ್ದಾರೆ. ಈ ಚಿತ್ರವನ್ನು ಸಚಿನ್ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ಗೌಡ ಬಂಡವಾಳ ಹೂಡಿದ್ದಾರೆ. ಇನ್ನು ಚರಣ್ ರಾಜ್ ಸಂಗೀತ ಹಾಗೂ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಇನ್ನು ಪಾತ್ರವರ್ಗದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಕಲಾವಿದರಿದ್ದಾರೆ.