ಸೋಶಿಯಲ್ ಮೀಡಿಯಾ ಬಳಕೆದಾರನಿಗೆ ಎಷ್ಟು ಉಪಯುಕ್ತ, ಜನಸ್ನೇಹಿಯೋ ಅಷ್ಟೇ ಪ್ರಮಾಣದಲ್ಲಿ ವಿಲನ್ ಕೂಡ. ಕೊಂಚ ಎಚ್ಚರ ತಪ್ಪಿದರೂ ಸಹ ಬಿಡಿಸಿಕೊಳ್ಳಲಾಗದ, ಸಾರ್ವಜನಿಕವಾಗಿ ಕಸಿವಿಸಿ ಅನುಭವಿಸಬೇಕಾದ ಸಂಕಷ್ಟಗಳೇ ಹೆಚ್ಚಾಗಿರುತ್ತದೆ. ಜನಸಾಮಾನ್ಯರ ಪಾಡು ಒಂದು ರೀತಿಯದಾದರೆ ಸೆಲಡಬ್ರೆಟಿಗಳ ಸ್ಥಿತಿ ಇನ್ನು ಕಠೋರವಾಗಿರುತ್ತದೆ.
ಇದೀಗ ಅಂತಹುದೇ ಪ್ರಕರಣವೊಂದು ಸ್ಯಾಂಡಲ್ವುಡ್ನಲ್ಲಿ ಬೆಳಕಿಗೆ ಬಂದಿದೆ. ಕನ್ನಡ ಕಂಚಿನ ಧ್ವನಿಯ ನಟನೆಂದು ಖ್ಯಾತಿ ಪಡೆದ ವಸಿಷ್ಠ ಎನ್ ಸಿಂಹ ಹೆಸರಿನಲ್ಲಿ ಖಾತೆ ತೆಗೆದು ಹುಡುಗಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಯೋಬ್ಬ ಪೋಲಿಸರ ಅತಿಥಿಯಾಗಿದ್ದಾನೆ.
ಈತ ವಸಿಷ್ಠ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಹುಡುಗಿಯರನ್ನು ಯಾಮಾರಿಸುತ್ತಿದ್ದ. ‘ನಾನು ಅವರ ಸಹಾಯಕ. ಅವರ ಮೊಬೈಲ್ ನಂಬರ್ ಕೊಡ್ತೀನಿ’ ಎಂದು ಹೇಳಿ ತನ್ನ ಇನ್ನೊಂದು ಮೊಬೈಲ್ ನಂಬರ್ ನೀಡುತ್ತಿದ್ದನಂತೆ. ಇನ್ನು ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅವರಿಂದ ಹಣ ತೆಗೆದುಕೊಂಡು ವಂಚಿಸುತ್ತಿದ್ದನಂತೆ. ಇದೀಗ ಆರೋಪಿ ಸೈಬರ್ ಕ್ರೈ ಪೋಲಿಸರ ಬಲೆಗೆ ಬಿದ್ದಿದ್ದಾನೆ.
ಆರೋಪಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರವನ್ನು ನಟ ವಸಿಷ್ಠ ಸಿಂಹ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದು, ನಕಲಿ ಸ್ಟಾರ್ಗಳ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ.
No Comment! Be the first one.