ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸುತ್ತಾ ಬದುಕು ಕಟ್ಟಿಕೊಂಡು ಲೈಮ್ ಲೈಟಿಗೆ ಬಂದ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್. ಭಾರತದ ಅನ್ನ ತಿಂದು ಒಂದು ದಿನಕ್ಕಾದರೂ ಅನ್ನದ ಋಣ ತೀರುವ ಕೆಲಸವನ್ನು ಮಾಡುವ ಆಲೋಚನೆಯನ್ನೇ ಮಾಡಲಿಲ್ಲ. ಸದಾ ಭಾರತದ ವಿರುದ್ಧವಾಗಿಯೇ ಪ್ರತಿಕ್ರಯಿಸುತ್ತಿರುತ್ತಾರೆ. ಹಿಂದಿ ಭಾಷೆ ಸೇರಿದಂತೆ ಕನ್ನಡದಲ್ಲಿಯೂ ಅಭಿನಯಿಸಿರುವ ವೀಣಾ ಮಲ್ಲಿಕ್  ಭಾರತದ ಗಡಿ, ಸೇನೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಕಿ ಹಚ್ಚುವ ಹೇಳಿಕೆಗಳನ್ನು, ಟ್ವೀಟ್ ಗಳನ್ನು ಮಾಡುತ್ತಲೇ ನ್ಯೂಸಾಗುತ್ತಿರುತ್ತಾರೆ.

https://twitter.com/iVeenaKhan/status/1158874106940592128

ಸದ್ಯ ಮತ್ತೊಮ್ಮೆ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಹೌದು.. ಸುಷ್ಮಾ ಸ್ವರಾಜ್​ ಅವರು ನಿಧನ ಹೊಂದಿದ ವಿಷಯ ತಿಳಿಯುತ್ತಿದ್ದಂತೆಯೇ ವೀಣಾ ತಮ್ಮ ಟ್ವಿಟರ್​ನಲ್ಲಿ RIH ಎಂದು ಹೆಸರನ್ನು ಉಲ್ಲೇಖಿಸದೆ ನರಕಕ್ಕೆ ಹೋಗಲಿ ಎಂದು ಟ್ವೀಟ್​ ಮಾಡಿದ್ದಾರೆ. ಅವರ ಟ್ವೀಟಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಣಾ ಮಲ್ಲಿಕ್ ವಿರುದ್ಧ ಸಂದೇಶಗಳು ಸಾಕಷ್ಟು ರವಾನೆಯಾಗುತ್ತಿವೆ.

CG ARUN

ದಬಾಂಗ್ 3 ಸೆಟ್ ನಲ್ಲಿ ಮೊಬೈಲ್ ಬ್ಯಾನ್!

Previous article

ಉದಯ ಟಿವಿಯಲ್ಲಿ ನಾನು ನನ್ನ ಕನಸು ಧಾರವಾಹಿ!

Next article

You may also like

Comments

Leave a reply

Your email address will not be published. Required fields are marked *