ವೇಷಧಾರಿ ಎನ್ನುವ ಸಿನಿಮಾ ತಯಾರಾಗಿದೆ. ಮಾದ್ಯಮವೂ ಸೇರಿದಂತೆ ಸಾಕಷ್ಟು ಕಡೆ ಕೆಲಸ ಮಾಡಿ ಅನುಭವ ಪಡೆದು ಈಗ ಸಿನಿಮಾ ನಿರ್ದೇಶನ ಮಾಡಿದ್ದಾರೆ. ತಮ್ಮ ಸಿನಿಮಾ ಯಾನದ ಕುರಿತು ಇಲ್ಲಿ ವಿವರಣೆ ನೀಡಿದ್ದಾರೆ…

ನಿರೂಪಣೆ: ಸುಮ .ಜಿ

ನಾನು ಮೂಲತಃ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗುಡಿಗೇರಿ ತಾಲ್ಲೂಕಿನ ರೈತಾಪಿ ಕುಟುಂಬದವನು. ಹುಟ್ಟಿ ಬೆಳೆದದ್ದೆಲ್ಲಾ ಗುಡಿಗೇರಿಯಲ್ಲೇ. ಮೊದಲಿನಿಂದಲೂ ಕಥೆ ಕಾದಂಬರಿ ಬರೆಯುವ ಆಸಕ್ತಿ ಇತ್ತು. ಹೀಗೇ ಉಪೇಂದ್ರ ಅವರ ’ಎ’ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ನೋಡಿ ನನಗೆ ಈ ರೀತಿಯ ಡಿಫರೆಂಟ್ ಸ್ಟೋರಿ ಇರುವಂತಹ ಸಿನಿಮಾ ಮಾಡಬೇಕು ಎಂಬ ಹಂಬಲ ಶುರುವಾಯಿತು. ಈ ಹಂಬಲ ನನ್ನನ್ನು ಬೆಂಗಳೂರಿಗೆ ಬರುವಂತೆ ಮಾಡಿತು. ನನಗೆ ಸಿನಿಪ್ರಪಂಚದ ಅನುಭವವಿಲ್ಲದ ಕಾರಣ ಕೆಲವು ಬೇಸರದ ಅನುಭವಗಳಾದವು. ಮತ್ತೆ ಊರಿನ ಕಡೆ ಮುಖಮಾಡಿ ಹೊರಟೆ. ಓದನ್ನು ಮುಗಿಸಿ, ಬೆಂಗಳೂರಿನ ಒಂದು ಸಿನಿಮಾ ಇನ್‌ಸ್ಟೂಟ್‌ಗೆ ಸೇರಿದೆ. ಸಿನಿಮಾದ ಹಲವು ರೂಪುರೇಷೆಗಳನ್ನು ಅರಿತು,ಅವಕಾಶಕ್ಕಾಗಿ ಹುಡುಕತೊಡಗಿದೆ. ಹಿರಿಯೂರ ರಾಘವೇಂದ್ರ ರವರ ಪರಿಚಯವಾಯಿತು. ಅವರೊಂದಿಗೆ ಸಣ್ಣ-ಸಣ್ಣ ಕೆಲಸಗಳನ್ನು ಮಾಡುತ್ತಾ ಹೋದೆ. ಒಂದು ಕಿರುಚಿತ್ರ ಮಾಡಿದೆ, ಅದರಿಂತ ಒಳ್ಳೆ ಅನುಭವವನ್ನು ಪಡೆದುಕೊಂಡೆ.

ಆದರೆ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ. ಮನೆಯಲ್ಲೂ ಸಹ ಇದೆಲ್ಲಾ ನಮ್ಮಂತವರಿಗಲ್ಲ ಎಂಬ ಉತ್ತರ ಬಂತು. ಆದರೆ ಮನಸ್ಸಿನಲ್ಲಂತೂ ಆಸೆ ಇತ್ತು, ಒಂದೊಳ್ಳೆ ಸಿನಿಮಾ ಮಾಡಲೇಬೇಕು ಅಂತ. ಮೀಡಿಯಾದ ನ್ಯೂಸ್ ಹಾಗೂ ಎಂಟಟೈನ್’ಮೆಂಟ್ ವಿಭಾಗಗಳಲ್ಲಿ ಅವಕಾಶ ಸಿಕ್ಕಿತು. ೨೦೦೯ರಿಂದ ಸುಮಾರು ೮-೧೦ ವರ್ಷ ಮೀಡಿಯಾದಲ್ಲಿ ಕಾರ್ಯ ನಿರ್ವಹಿಸಿದೆ. ಒಂದು ಕಾರ್ಯಕ್ರಮದ ಮೂಲಕ ಸಮಾಜದ ಕೆಲವರು ಸ್ವಾಮೀಜಿಗಳ ವೇಷ ಧರಿಸಿ ಕಮರ್ಷಿಯಲ್ ಆಗಿ ಚಿಂತನೆ ಮಾಡುವವರ ಮನಸ್ಥಿತಿಯನ್ನು ಅರಿತು, ಅದು ನನ್ನನ್ನು ಕಾಡುವುದಕ್ಕೆ ಶುರುವಾಯಿತು. ಮುಗ್ದ ಮನಸ್ಸಿನ ಜನರನ್ನು ಮೋಸ ಮಾಡುವ ಈ ರೀತಿಯ ಸ್ವಾಮೀಜಿಗಳ ಕುರಿತು ಸಿನಿಮಾ ಮಾಡುವ ಬಯಕೆಯಾಯಿತು. ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಆಸೆ ಇದೆ ಅಂತ ಎಲ್ಲರಿಗೂ ತಿಳಿದಿರುವ ವಿಷಯ. ಆಸೆ ಇಲ್ಲದವರು ಪ್ರಪಂಚದಲ್ಲೇ ಇಲ್ಲ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಆಸೆ ಇರುತ್ತೆ. ಬದುಕಿಗೆ ಆಸೆ ಮುಖ್ಯ ಕೂಡ ಹೌದು. ಆಸೆ ಅತಿ ಆದರೆ ಅದೂ ಒಳ್ಳೇದಲ್ಲ. ಇದನ್ನ ಎಳೆಯಾಗಿಟ್ಟುಕೊಂಡು ಮಾಡಿರುವಂತಹ ಚಿತ್ರ ವೇಷಧಾರಿ.

ಇದಕ್ಕೆ ಬೇಕಾದಂತಹ ಸ್ಟೋರಿ, ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲ ರೀತಿಯ ತಯಾರಿ ಮಾಡಿಕೊಂಡೆ. ಇದಕ್ಕೆ ನಿರ್ಮಾಪಕರನ್ನು ಹುಡುಕತೊಡಗಿದೆ. ನಿರ್ಮಾಪಕರಾಗಿ ಅನಿಲ್ ಹಂಪಿ ಅವರನ್ನು ಅಪ್ರೋಚ್ ಮಾಡಿದೆ. ಅನಿಲ್ ಅವರಿಗೆ ಸಿನಿಮಾಮಾಡುವ ಬಗ್ಗೆ ಆಸಕ್ತಿ ಇತ್ತು, ಆದರೆ ಟೆಕ್ನಿಕಲ್‌ಆಗಿ ಏನೂ ತಿಳಿದಿರಲಿಲ್ಲ. ಆದರೂ ಅವರು ಈ ಕಥೆ ಕೇಳಿ ಚಿತ್ರ ನಿರ್ಮಾಣ ಒಪ್ಪಿದರು. ಒಂದು ಸೀರಿಯಸ್ ಆದ ಸಬ್ಜೆಕ್ಟ್‌ಅನ್ನು ಕಾಮಿಡಿಯಾಗಿ ಅದ್ಭುತವಾಗಿ ಹೇಳಿದ್ದೇವೆ.ನಾಯಕನಾಗಿ ಹೊಸ ಪ್ರತಿಭೆ ಆರ್ಯನ್, ನಾಯಕಿಯಾಗಿ ಶೃತಿ, ಸೋನಂ ರೈ, ಆಶ್ವಿತ, ಬಿರಾದಾರ್, ಮೋಹನ್ ಜುನೇಜ, ಮೈಕಲ್ ಮಧು, ಕುರಿ ಪ್ರತಾಪ್ ಹಾಗೂ ಇತರೆ ಹಲವು ನಟರು ಅದ್ಭುತವಾಗಿ ಅಭಿನಯಿಸಿದ್ದಾರೆ.

CG ARUN

ಗುಳ್ಟು ತಂಡವನ್ನು ಸೇರುವ ಕನಸು ನನಸಾಯಿತು!

Previous article

24ಕ್ಕೆ ‘ಮೋಕ್ಷ’ದ ಟೀಸರ್!

Next article

You may also like

Comments

Leave a reply

Your email address will not be published. Required fields are marked *