ಪಂಚತಂತ್ರ ಸಿನಿಮಾದ ಮೂಲಕ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಂಡಿದ್ದರು ವಿಹಾನ್ ಗೌಡ. ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದ ವಿಹಾನ್ ಸದ್ಯ ಮಲಯಾಳಂಗೆ ಎಂಟ್ರಿ ಕೊಡುತ್ತಿದ್ದಾರೆ. ವಿಹಾನ್ ನಟಿಸಿದ್ದ ಕಾಲ್ ಕೇಜಿ ಪ್ರೀತಿಯೇ ಮಲಯಾಳಂಗೆ ರಿಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ವಿಹಾನ್ ಅವಕಾಶ ಪಡೆದಿದ್ದಾರೆ. ಸದ್ಯಕ್ಕೆ ಈ ಚಿತ್ರದಲ್ಲಿ ಇವರು ಮಾತ್ರ ನಟಿಸುವುದು ಕನ್ಫರ್ಮ್ ಆಗಿದ್ದು, ಉಳಿದ ತಾರಾಗಣ ಇನ್ನೂ ಫೈನಲ್ ಆಗಿಲ್ಲ. ಸತ್ಯ ನಿರ್ದೇಶನ ಮಾಡಿದ್ದ ವಿಹಾನ್ಗೌಡ ಮತ್ತು
ಹಿತಾ ಚಂದ್ರಶೇಖರ್ ನಟಿಸಿದ್ದ ಈ ಸಿನಿಮಾ ಕನ್ನಡದಲ್ಲಿ ಬಾಕ್ಸ್ಆಫೀಸ್ನಲ್ಲಿ ಅಷ್ಟೇನು ಸದ್ದು ಮಾಡದಿದ್ದರೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ಅಲ್ಲದೆ ವಿಹಾನ್ಗೆ ಬಾಲಿವುಡ್ ನಟನಿದ್ದ ಹಾಗಿದ್ದಾರೆನ್ನುವ ಪಾಲಿಟೀವ್ ಪ್ರತಿಕ್ರಿಯೆಗಳೂ ಬಂದಿದ್ದವು. ಪಂಚತಂತ್ರದ ನಂತರ ಸುಮಾರು ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದಾರೆ, ಸದ್ಯಕ್ಕೆ ಯಾವುದನ್ನು ಒಪ್ಪಿಕೊಂಡಿಲ್ಲ.
No Comment! Be the first one.