ಕೊರೊನಾ ಟೈಮಲ್ಲೂ ಕಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ ಅಂದ್ರೆ ಅದು ಮಾಸ್ಟರ್ ಮೂವಿ.. ಸಂಕ್ರಾತಿ ಹಬ್ಬಕ್ಕೆ ವಿಜಯ್ ಅಭಿಮಾನಿಗಳಿಗೆ ರಸದೌತಣ ನೀಡಿದ ಮೂವಿ ಈ ಮಾಸ್ಟರ್ ಸಿನಿಮಾ ಎಷ್ಟು ಗ್ರ್ಯಾಂಡ್ ಆಗಿ ಸೌಂಡ್ ಮಾಡ್ತೋ ಅದರ ಎರಡು ಪಟ್ಟು ಸದ್ದು ಮಾಡಿದ್ದೇ ವಾದಿ ಕಮಿಂಗ್ ಅನ್ನೋ ಸಾಂಗ್.. ಇದೀಗ ಈ ಸಾಂಗ್ ಗೆ ನಟಿ ಮಣಿಯರು ಹೆಜ್ಜೆ ಹಾಕಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಜೊತೆಗೆ ಅವರ ಡ್ಯಾನ್ಸ್ ಕೂಡ ಸಖತ್ ವೈರಲ್ ಆಗುತ್ತಿದೆ..
- ಸಂತೋಷ್ ಸಕ್ರೆಬೈಲು
ಇತ್ತ ಕೊರೊನಾ ಅಬ್ಬರ.. ಜೊತೆಗೆ ಪೊಂಗಲ್ ಫೆಸ್ಟಿವಲ್ ಟೈಮ್ ಕೂಡಾ ಬಂದಿತ್ತು. ಈ ಸಮಯಕ್ಕೆ ಸರಿಯಾಗಿ ಮಾಸ್ಟರ್ ಸಿನಿಮಾವನ್ನ ಬಿಗ್ ಸ್ಕ್ರೀನ್ ಗಳಲ್ಲಿ ಕಾಣುವಂತೆ ಮಾಡಿದ್ರು.. ಇನ್ನು ಆಗ ತಾನೇ ಕೊರೊನಾ ರೂಲ್ಸ್ ಗಳನ್ನ ಕೊಂಚ ಸಡಿಲಿಕೆ ಮಾಡಿ, ಥಿಯೇಟರ್ ಗಳಲ್ಲಿ ಪ್ರೇಕ್ಷಕರು ಸಿನಿಮಾವನ್ನ ನೋಡೋಕೆ ಅವಕಾಶ ನೀಡಲಾಗಿತ್ತು.
ನಂತರ ಈ ಸಿನಿಮಾ ಬಿಗ್ ಹಿಟ್ ಆಯಿತು. ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತು. ಈಗ ಇದ್ದಕ್ಕಿದ್ದಂತೆ ಇನಿರುದ್ಧ್ ಕಂಪೋಸ್ ಮಾಡಿದ ವಾದಿ ಕಮಿಂಗ್ ಸಾಂಗ್ ಅಂತೂ ಹೇಳಲಾರದ ಮಟ್ಟಿಗೆ ಜನರ ಬಾಯಲ್ಲಿ ಸದ್ದು ಮಾಡೋಕೆ ಶುರು ಮಾಡಿದೆ.. ಅಲ್ಲದೇ ಗಲ್ಲಿಗಲ್ಲಿಗಳಲ್ಲೂ ವಾಟಿ ಕಮಿಂಗ್ ಹವಾ ಇನ್ನು ಇದ್ದು, ಕ್ರಿಕೆಟ್ ಸ್ಟಾರ್ ಗಳು ಕೂಡ ಈ ಸಾಂಗ್ ಗೆ ಸ್ಟೆಪ್ ಹಾಕಿದ್ದಾರೆ..
ಇದೀಗ ಕಾಲಿವುಡ್ ಮತ್ತು ಸ್ಯಾಂಡಲ್ವುಡ್ ನಲ್ಲಿ ನಟಿಸಿರೋ ನಟಿ ಜೆಲಿನಿಯಾ ಡಿಸೋಜಾ ಕೂಡ ವಿಜಯ್ ನಟನೆಯ ಮಾಸ್ಟರ್ ಸಿನಿಮಾದ ವಾದಿ ಕಮಿಂಗ್ ಸಾಂಗ್ ಗೆ ಫ್ರೆಂಡ್ಸ್ ಜೊತೆ ಸೇರಿ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋವನ್ನ ತಮ್ಮ ಇನ್ಸ್ಚಾಗ್ರಾಮ್ ಖಾತೆಯಲ್ಲಿ ‘ಈ ವಿಡಿಯೋ ವಿಜಯ್ಗೋಸ್ಕರ’ ಅಂತ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜೆನಿಲಿಯಾ ಗಂಡ ಕೂಡ ಸ್ಪೆಪ್ ಹಾಕಿದ್ದು ವಿಶೇಷವಾಗಿದೆ.. ಒಟ್ಟಾರೆ ‘ಮಾಸ್ಟರ್’ ಮೂವಿ ಎಷ್ಟು ಸದ್ದು ಮಾಡಿತ್ತೋ ಅದರ ದುಪ್ಪಟ್ಟು ಸದ್ದು ಮಾಡ್ತಿರೋದೇ ‘ವಾದಿ.. ಕಮಿಂಗ್ ಸಾಂಗ್…’
No Comment! Be the first one.