’ಡಿಯರ್ ಕಾಮ್ರೇಡ್’ ತೆಲುಗು ಸಿನಿಮಾ ನಂತರ ವಿಜಯ್ ದೇವರಕೊಂಡ ಹೊಸ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ’ಮಲ್ಲಿ ಮಲ್ಲಿ ಇದಿ ರಾಣಿ ರೋಜು’ ತೆಲುಗು ಸಿನಿಮಾ ಖ್ಯಾತಿಯ ನಿರ್ದೇಶಕ ಕ್ರಾಂತಿ ಮಾಧವ್ ಈ ಹೊಸ ಚಿತ್ರದ ಸಾರಥ್ಯ ವಹಿಸಿದ್ದಾರೆ. ಮೊನ್ನೆಯಷ್ಟೇ ಚಿತ್ರದಲ್ಲಿನ ವಿಜಯ್ರ ಫಸ್ಟ್ ಲುಕ್ ಲೀಕ್ ಆಗಿತ್ತು. ಖಾಕಿ ತೊಟ್ಟು ಮಧ್ಯಮವರ್ಗದ ಕುಟುಂಬದ ಕಾರ್ಮಿಕನಂತೆ ಅವರ ಗೆಟಪ್ ಇತ್ತು. ಚಿತ್ರದಲ್ಲಿ ಮೂವರು ನಾಯಕಿಯರ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೀಗ ನಾಲ್ಕನೇ ನಾಯಕಿಯಾಗಿ ಕ್ಯಾಥರೀನ್ ತ್ರೆಸಾ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಚಿತ್ರದ ಕತೆಯ ಬಗ್ಗೆ ಕೊಂಚವೂ ಸುಳಿವು ಬಿಟ್ಟುಕೊಡದ ನಿರ್ದೇಶಕ ಕ್ರಾಂತಿ ಮಾಧವ್, ಇದೊಂದು ರೊಮ್ಯಾಂಟಿಕ್ ಎಂಟರ್ಟೇನರ್ ಎಂದಷ್ಟೇ ಹೇಳುತ್ತಾರೆ. ಅದಕ್ಕೆ ಸರಿಯಾಗಿ ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ! ರಾಶಿ ಖನ್ನಾ, ಐಶ್ವರ್ಯಾ ರಾಜೇಶ್ ಮತ್ತು ಇಸಾಬೆಲ್ಲಾ ಡೇ ಮೊದಲೇ ಅಯ್ಕೆಯಾಗಿದ್ದು, ನಾಲ್ಕನೆಯವರಾಗಿ ಕ್ಯಾಥರೀನ್ ತ್ರೆಸಾ ಬಂದಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಶುರುವಾಗಿದ್ದು, ಮೊದಲ ಹಂತದ ಚಿತ್ರೀಕರಣದಲ್ಲೇ ಕ್ಯಾಥರೀನ್ ವಿಜಯ್ ಜೊತೆ ನಟಿಸಲಿದ್ದಾರೆ. ಸಂಗೀತ ಸಂಯೋಜನೆ ಗೋಪಿ ಸುಂದರ್ ಅವರದು.
#
No Comment! Be the first one.