ಎಂಥವರ ಬದುಕಿನಲ್ಲೂ ಏಳು ಬೀಳುಗಳಿದ್ದದ್ದೇ. ವಿಜಯಲಕ್ಷ್ಮಿಯ ಲೈಫಲ್ಲಿ ಸ್ವಲ್ಪ ಹೆಚ್ಚೇ ಯಡವಟ್ಟುಗಳು ಸಂಭವಿಸಿರಬಹುದು. ಅದಕ್ಕೆಂದು ಜೀವ ತೆಗೆದುಕೊಳ್ಳುವ ಹೀನ ಕೆಲಸ ಯಾಕೆ ಮಾಡಬೇಕು? ಇವತ್ತಿಗೂ ಈಕೆ ಬಂದ ಅವಕಾಶಗಳನ್ನು ಒಪ್ಪಿಕೊಂಡು, ನಿಯತ್ತಿನಿಂದ ನಟಿಸಿದರೆ ಎಲ್ಲವೂ ಸರಿಹೋಗುತ್ತದೆ. ಅದನ್ನು ವಿಜಿ ತಿಳಿದುಕೊಳ್ಳಬೇಕಷ್ಟೇ…

ನಾಗಮಂಡಲದ ನಟಿ ವಿಜಯಲಕ್ಷ್ಮಿಗೆ ಯಾಕೆ ಹೀಗೆ ಮೇಲಿಂದ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿದ್ದಾಳೆ ಅಂತಾ ಗೊತ್ತಾಗುತ್ತಿಲ್ಲ. ಕಳೆದ ವರ್ಷ ಬೆಂಗಳೂರಿಗೆ ಬಂದು, ಒಂದಷ್ಟು ಜನರಿಂದ ಸಹಾಯ ಗಿಟ್ಟಿಸಿಕೊಂಡು, ಸಿನಿಮಾದಲ್ಲಿ ನಟಿಸುವುದಾಗಿ ಅಡ್ವಾನ್ಸ್ ಪಡೆದು ತನ್ನ ತಾಯಿ ಮತ್ತು ಅಕ್ಕನ ಸಮೇತ ಚೆನ್ನೈ ಕಡೆ ಹೊರಟುಬಿಟ್ಟಿದ್ದಳು. ಹಾಗೆ ಹೋದವಳು ಇನ್ಯಾವತ್ತೂ ಕರ್ನಾಟಕಕ್ಕೆ ಕಾಲಿಡೋದಿಲ್ಲ ಅಂತಲೂ ಹೇಳಿಕೆ ಕೊಟ್ಟಿದ್ದಳು.

ಇದಾದ ಮೇಲೆ ವಾರಕ್ಕೆ ಮುಂಚೆ ನನ್ನ ಬದುಕು ಹಾಳಾಗಲು ನಟ, ರಾಜಕಾರಣಿ ಸೀಮನ್ ಜೊತೆಗೆ ಜಯಪ್ರದಾ ಕೂಡಾ ಕಾರಣ. ಅವರ ತಮ್ಮನನ್ನು ನನ್ನ ಅಕ್ಕ ಉಶಾದೇವಿ ಮದುವೆಯಾಗಿದ್ದಳು. ತನ್ನ ಸಹೋದರ ಸೈಕೋ ಅಂತಾ ಗೊತ್ತಿದ್ದರೂ ಜಯಪ್ರದಾ ನನ್ನ ಅಕ್ಕನೊಟ್ಟಿಗೆ ಮದುವೆ ಮಾಡಿಸಿದರು. ನಂತರ ಮಗ ಕೂಡಾ ಹುಟ್ಟಿದ. ಜಯಪ್ರದಾಳ ತಮ್ಮ ನನ್ನ ಅಕ್ಕ ಮತ್ತು ನನ್ನ ಕುಟುಂಬಕ್ಕೆ ಕೊಡಬಾರದ ಕಷ್ಟ ಕೊಟ್ಟ. ಬಿಡಿಗಾಸನ್ನೂ ಕೊಡದೇ ಅಕ್ಕ ತಮ್ಮ ಸೇರಿ ಉಶಾದೇವಿಯನ್ನು ಹೊರಹಾಕಿದರು. ಹೀಗೆ ನನ್ನ ಬದುಕು ಹಾಳಾಗಲು ಜಯಪ್ರದಾ ನೇರ ಕಾರಣ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಳು. ಇದೀಗ ಬಂದ ಸುದ್ದಿಯ ಪ್ರಕಾರ ವಿಜಯಲಕ್ಷ್ಮಿ ಇಂದು ಆತ್ಮ ಹತ್ಯೆಗೆ ಯತ್ನಿಸಿದ್ದಾಳಂತೆ. ಪುಣ್ಯಕ್ಕೆ ಆಕೆಯ ಜೀವಕ್ಕೇನೂ ಹಾನಿ ಆಗಿಲ್ಲವಂತೆ. ಸದ್ಯ ಆಕೆ ಚೆನ್ನೈನ ಮಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನುವ ಸುದ್ದಿ ಬಂದಿದೆ. ಇಂದು ಬೆಳಗ್ಗೆ ವಿಜಿಯ ಅಕ್ಕ ಉಶಾ ಕನ್ನಡದ ನಟ ರಾಮ್ ಅವರಿಗೆ ಕರೆ ಮಾಡಿ, ಒಂದು ವರ್ಷಕ್ಕೆ ಮುಂಚೆ ನಾವು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾಗ ನೀವು ಒಂದು ಲಕ್ಷ ಹಣ ಕೊಟ್ಟು ಸಹಕರಿಸಿದ್ದೀರಿ. ಆದರೆ ಕೆಟ್ಟ ಘಳಿಗೆ ಯಾವ್ಯಾವುದೋ ಕಾರಣಕ್ಕೆ ನಿಮ್ಮ ಮೇಲೆ ಕಂಪ್ಲೇಂಟ್ ಕೊಟ್ಟು, ನಿಮಗೆ ನೋವು ಮಾಡಿದ್ದೀವಿ. ಯಾವತ್ತಾದರೂ ಒಂದು ದಿನ ನೀವು ಕೊಟ್ಟ ಹಣವನ್ನು ಅಷ್ಟಿಷ್ಟು ಕೊಟ್ಟು ತೀರಿಸುತ್ತೇವೆ, ದಯವಿಟ್ಟು ಕ್ಷಮಿಸಿಬಿಡಿʼʼ ಅಂದಿದ್ದಾಳೆ. ಇದರ ಬೆನ್ನಿಗೇ ವಿಜಯಲಕ್ಷ್ಮಿ ಸೂ ಸೈ ಡ್ ಅಟೆಂಪ್ಟ್ ಮಾಡಿದ್ದಾಳೆ. ಇವನ್ನೆಲ್ಲಾ ನೋಡಿದರೆ, ವಿಜಯಲಕ್ಷ್ಮಿ ಮತ್ತವಳ ಕುಟುಂಬ ಇನ್ನೂ ಮನೋವ್ಯಾಕುಲದಿಂದ ಹೊರಬಂದಂತೆ ಕಾಣುತ್ತಿಲ್ಲ. ವಿಜಯಲಕ್ಷ್ಮಿ ಏನೇ ಅರಚಾಡಿದರೂ, ದಿನಕ್ಕೆ ನಾಲ್ಕು ಸಲ ಫೇಸ್ ಬುಕ್ ಲೈವ್ ಬಂದು ತನಗಾಗದವರನ್ನು ಕೆಣಕುತ್ತಿದ್ದರೂ ತಮಿಳು ಮೀಡಿಯಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದನ್ನು ಸುದ್ದಿ ಅಂತಾ ಪರಿಗಣಿಸುತ್ತಿಲ್ಲ. ಮೀಡಿಯಾವನ್ನು ತನ್ನತ್ತ ತಿರುಗಿಸಿಕೊಳ್ಳಲು ವಿಜಿ ಡ್ರಾಮಾ ಮಾಡಿದ್ದಾಳಾ ಅಥವಾ ನಿಜಕ್ಕೂ ಕೆಟ್ಟ ನಿರ್ಧಾರ ಮಾಡಿದ್ದಾಳಾ ಸದ್ಯಕ್ಕೆ ಗೊತ್ತಿಲ್ಲ.

ಎಂಥವರ ಬದುಕಿನಲ್ಲೂ ಏಳು ಬೀಳುಗಳಿದ್ದದ್ದೇ. ವಿಜಯಲಕ್ಷ್ಮಿಯ ಲೈಫಲ್ಲಿ ಸ್ವಲ್ಪ ಹೆಚ್ಚೇ ಯಡವಟ್ಟುಗಳು ಸಂಭವಿಸಿರಬಹುದು. ಅದಕ್ಕೆಂದು ಜೀವ ತೆಗೆದುಕೊಳ್ಳುವ ಹೀನ ಕೆಲಸ ಯಾಕೆ ಮಾಡಬೇಕು? ಇವತ್ತಿಗೂ ಈಕೆ ಬಂದ ಅವಕಾಶಗಳನ್ನು ಒಪ್ಪಿಕೊಂಡು, ನಿಯತ್ತಿನಿಂದ ನಟಿಸಿದರೆ ಎಲ್ಲವೂ ಸರಿಹೋಗುತ್ತದೆ. ಅದನ್ನು ವಿಜಿ ತಿಳಿದುಕೊಳ್ಳಬೇಕಷ್ಟೇ…

CG ARUN

ಕನ್ನಡ ನಮ್ಮ ಅಸ್ಮಿತೆ ಅಂದರು ಅಶ್ವಿತಿ….

Previous article

ಪುನೀತ್‌ ಜೊತೆ ಪುಳಿಯೋಗರೆ ಜಾಹೀರಾತಿನಲ್ಲಿ…

Next article

You may also like

Comments

Leave a reply

Your email address will not be published. Required fields are marked *