ತಮಿಳಿನ ಫ್ರೆಂಡ್ಸ್, ಬಾಸ್ ಎಂಜಿರ ಭಾಸ್ಕರನ್ ಫೇಮಿನ ಕನ್ನಡದ ನಟಿ ವಿಜಯಲಕ್ಷ್ಮಿ ಕೆಲವು ತಿಂಗಳುಗಳ ಹಿಂದಷ್ಟೇ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಸ್ವಲ್ಪ ಗುಣಮುಖರಾಗಿದ್ದರು. ಅಲ್ಲದೇ ನಟ ರವಿಪ್ರಕಾಶ್ ಅವರ ವಿರುದ್ಧವೂ ಆಸ್ಪತ್ರೆಯಲ್ಲಿ ಖರ್ಚು ನೋಡಿಕೊಳ್ಳುವ ನೆಪದಲ್ಲಿ ನನಗೆ ಲೈಂಗಿಕ ಶೋಷಣೆಗೆ ಮುಂದಾಗಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರನ್ನು ನೀಡಿದ್ದರು. ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ಮಂದಿ ವಿಜಯಲಕ್ಷ್ಮಿ ಅವರಿಗೆ ಆರ್ಥಿಕ ಸಹಾಯವನ್ನು ಒದಗಿಸಿದ್ದರು. ಆದರೆ ಮಾನಸಿಕವಾಗಿ ಬಹಳ ನೊಂದಿರುವ ಅವರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಆರ್ಥಿಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

விஜயலக்ஷ்மி #தலைவரை சந்திக்க வேண்டி வெளியிட்ட வீடியோ.. .

Gepostet von Rajini Rajesh am Mittwoch, 7. August 2019

ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಲು ಅನುವು ಮಾಡಿಕೊಡಿ ಎಂಬ ವಿಡಿಯೋವೊಂದನ್ನು ಹರಿಬಿಟ್ಟಿರುವ ವಿಜಯಲಕ್ಷ್ಮಿ ಸಹಾಯಕ್ಕಾಗಿ ಮತ್ತೆ ಅಂಗಲಾಚಿದ್ದಾರೆ. ಅನಾರೋಗ್ಯದಿಂದ ಸಾಕಷ್ಟು ಬಳಲಿರುವ ವಿಜಯಲಕ್ಷ್ಮಿ ಕಾಣದ ಕೈಗಳ ದೌರ್ಜನ್ಯಕ್ಕೂ ತುತ್ತಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ.

CG ARUN

ಬಾಲಿವುಡ್ ಗೆ ಮಲೈಕಾ ಅರೋರಾ ಮಗ!

Previous article

ಪೈಲ್ವಾನ್ ಆಡಿಯೋ ಮತ್ತೆ ಮುಂದಕ್ಕೆ!

Next article

You may also like

Comments

Leave a reply

Your email address will not be published. Required fields are marked *