ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಮೂಲಕ ಭಾರತದಾದ್ಯಂತ ಧೂಳೆಬ್ಬಿಸಿದ್ದ ವಿಕ್ಕಿ ಕೌಶಲ್ ಅವರ ಅಭಿನಯವನ್ನು ಯಾರು ತಾನೇ ಮರೆತಾರು. ಚಿತ್ರದಲ್ಲಿ ಯೋಧನ ಪಾತ್ರ ಮಾಡಿದ್ದ ವಿಕ್ಕಿ ಕೌಶಲ್ ನಟನೆ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರ ಬಿಡುಗಡೆಯಾಗಿ 6 ತಿಂಗಳು ಕಳೆದು ಜುಲೈ 26ರ ಕಾರ್ಗಿಲ್ ವಿಜಯೋತ್ಸವ ದಿನದಂದು ಮಹಾರಾಷ್ಟ್ರದಲ್ಲಿ ಮರು ಬಿಡುಗಡೆಯೂ ಆಗಿತ್ತು. ಈ ಮಧ್ಯೆ ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿರುವ ವಿಕ್ಕಿ ಕೌಶಲ್, ಬಿಸಿ ಬಿಸಿ ಚಪಾತಿ ಮಾಡಿ ಕೊಟ್ಟಿದ್ದಾರೆ.
https://www.instagram.com/p/B0n0xILJYJ5/?utm_source=ig_web_copy_link
ಯೆಸ್.. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶಕ್ಕೆ ಭೇಟಿ ನೀಡಿದ ವಿಕ್ಕಿ ಕೌಶಲ್, ಸೇನಾ ಸಿಬ್ಬಂದಿಯೊಂದಿಗೆ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಅಲ್ಲದೇ ಅವರಿಗೋಸ್ಕರ ತಾವೇ ಸ್ವತಃ ಚಪಾತಿಯನ್ನೂ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ವಿಕ್ಕಿ ಕೌಶಲ್, ನಾನು ಇದೇ ಮೊದಲ ಬಾರಿಗೆ ಚಪಾತಿ ಮಾಡಿದ್ದೇನೆ. ಅದು ಸೇನೆಗಾಗಿ ಮಾಡಿದ್ದೇನೆ. ಇದು ನನಗೆ ಹೆಚ್ಚು ಸಂತೋಷವನ್ನು ನೀಡಿದೆ ಅಂತಾ ಬರೆದುಕೊಂಡಿದ್ದಾರೆ. ಇನ್ನು ಕೆಲವು ದಿನಗಳ ಕಾಲ ವಿಕ್ಕಿ ಕೌಶಲ್ ಸೇನಾ ಸಿಬ್ಬಂದಿಯೊಂದಿಗೆ ಉಳಿಯಲಿದ್ದಾರಂತೆ.
No Comment! Be the first one.