ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆಂಬ ಗಾಳಿಸುದ್ದಿ ಈಗಾಗಲೇ ಸಾಕಷ್ಟು ಹರಿದಾಡುತ್ತಿದೆ. ಆ ಗಾಳಿಸುದ್ದಿಗೆ ಈಗ ಜೀವ ಬಂದಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಹೊಸ ಸಿನಿಮಾ ಸೆಟ್ಟೇರಲಿದೆ.

ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ರೋಸ್, ಮಾಸ್ ಲೀಡರ್ ಖ್ಯಾತಿಯ ಸಹನಾಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದ ಹಾಟ್ ಸುದ್ದಿ ಏನಪ್ಪ ಅಂದ್ರೆ ವಿಕ್ರಂ ಮನೋರಂಜನ್ ಮತ್ತು ಸಹನಾ ಮೂರ್ತಿ ಕಾಂಬಿನೇಷನ್ನಿನ ಈ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡವಿದೆಯಂತೆ. ಹೌದು ವಿಕ್ರಂ ರವಿಚಂದ್ರನ್ ಅವರ ಜತೆ ನಟಿಸಲು ನೂತನ ಪ್ರತಿಭೆಗಳಿಗೆ ನಿರ್ದೇಶಕ ಸಹನಾ ಮೂರ್ತಿ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ನಾಯಕಿಯಾಗಲು ಆಸಕ್ತಿ ಹೊಂದಿರುವವರು (18 ರಿಂದ 23ರ ವಯೋಮಿತಿ) ತಮ್ಮ ಇತ್ತೀಚಿನ ಭಾವಚಿತ್ರಗಳನ್ನು 9972246666 ನಂಬರಿಗೆ ಕಳುಹಿಸಿಕೊಡಬೇಕು. ಗೌರಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಸೋಮಣ್ಣ ಮತ್ತು ಸುರೇಶ್ ಅವರು ನಿರ್ಮಿಸುತ್ತಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ರವಿ ವರ್ಮ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

CG ARUN

ನಾಕುಮುಖ ಚಿತ್ರದ ಹಾಡೊಂದನ್ನು ರಿಲೀಸ್ ಮಾಡಿದ ಕರ್ನಾಟಕ ಸಿಂಗಂ!

Previous article

ನೂರು ಮಿಲಿಯನ್ ವೀಕ್ಷಣೆ ಪಡೆದ ಏನಮ್ಮಿ ಏನಮ್ಮಿ ಸಾಂಗು!

Next article

You may also like

Comments

Leave a reply

Your email address will not be published. Required fields are marked *