ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಈಗ ವಿಕ್ರಾಂತ್ ರೋಣ ಆಗಿ ಬದಲಾಗಿದೆ. ಫ್ಯಾಂಟಮ್ ಹೆಸರು ಕನ್ನಡಿಗರ ಬಾಯಿಗೆ ಬಂದು ಮನಸ್ಸಿನಲ್ಲುಳಿಯುವುದು ಕಷ್ಟ ಎನ್ನುವ ಕಾರಣವಿರಬಹುದು. ಅಥವಾ ಈ ಚಿತ್ರದಲ್ಲಿ ಸುದೀಪ್ ಪಾತ್ರ ವಿಕ್ರಾಂತ್ ರೋಣ ಅಂತಾ ಗೊತ್ತಾಗಿ, ಆ ಹೆಸರೇ ಹೆಚ್ಚು ಫೇಮಸ್ ಆಗಿರುವುದರಿಂದ ಈಗ ಅದನ್ನೇ ಟೈಟಲನ್ನಾಗಿಸಿದ್ದಾರೆ.
ಪ್ರಪಂಚದ ಅತಿ ಎತ್ತರದ ಕಟ್ಟದ ಅನ್ನಿಸಿಕೊಂಡಿರುವ ಬುರ್ಜ್ ಖಲೀಫಾದ ಮೇಲೆ ಈ ಚಿತ್ರದ ಶೀರ್ಷಿಕೆ ಹಾಗೂ ಲಾಂಛನವನ್ನು ಸಹಾ ಪ್ರದರ್ಶನ ಮಾಡಲಾಗುತ್ತಿದೆ. 180 ಸೆಖೆಂಡುಗಳ ಅವಧಿಯ ದೃಶ್ಯ ಪ್ರಸಾರವಾಗುತ್ತಿರುವುದು ದಾಖಲೆಯಾಗಿದೆ. ಅದೂ ಅಲ್ಲದೆ ಕಿಚ್ಚನ ಇನ್ನೂರು ಅಡಿಗಳ ಬೃಹತ್ ವರ್ಚುವಲ್ ಕಟೌಟ್ ಕೂಡಾ ಬುರ್ಜ್ ಖಲೀಫಾದ ಮೇಲೆ ರಾರಾಜಿಸಲಿದೆ. ಈ ಮೂಲಕ ಇಷ್ಟು ದೊಡ್ಡ ಕಟೌಟ್ ಹೊಂದಿದ ವಿಶ್ವದ ಮೊದಲ ಹೀರೋ ಆಗಿ ಸುದೀಪ ಹೊರಹೊಮ್ಮಿದ್ದಾರೆ.
ಕಿಚ್ಚ ಸುದೀಪ ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭ ಇಷ್ಟು ದೊಡ್ಡ ಮಟ್ಟದಲ್ಲಿ, ಇಡೀ ಜಗತ್ತಿಗೇ ಗೊತ್ತಾಗುವಂತೆ ಆಚರಣೆಗೊಳ್ಳುತ್ತಿದೆ. ಸಿನಿಮಾದ ವಿಚಾರದಲ್ಲಿ ಸುದೀಪ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುವವರು. ಹೊಸ ತಂತ್ರಜ್ಞಾನಗಳು, ಮೇಕಿಂಗ್ ನಲ್ಲಿ ಭಿನ್ನ ಶೈಲಿಯನ್ನು ಪರಿಚಯಿಸಿದವರು ಸುದೀಪ್. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದುಕೊಂಡೇ ಪಕ್ಕದ ಭಾಷೆಗಳಲ್ಲಿ ವಿಲನ್ ಆಗಿ ಅಬ್ಬರಿಸಿದರು. ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಂಡು ರೆಕಾರ್ಡ್ ಕ್ರಿಯೇಟ್ ಮಾಡಿದರು. ಹೀಗೆ ಸದಾ ಹೊಸತನ್ನೇ ಧ್ಯಾನಿಸುವ ಆರಡಿ ಕಟೌಟ್ ರನ್ನ ಈಗ ಬುರ್ಜ್ ಖಲೀಫಾದ ಮೂಲಕ ಮತ್ತಷ್ಟ ಎತ್ತರಕ್ಕೇರಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಜಾಕ್ ಮಂಜು ನರ್ಮಾಣದ ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಬಜೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಕಾಡಿನ ಸೆಟ್ಗಾಗಿ ಕೋಟಿಗಟ್ಟಲೇ ಖರ್ಚು ಮಾಡಿ ಹೈದರಾಬಾದ್ ನಲ್ಲಿ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಿಸಿದ್ದಾರೆ. ಈ ಸಿನಿಮಾ ಆರಂಭದಿಂದಲೂ ಕ್ರಿಯೇಟ್ ಮಾಡುತ್ತಿರುವ ಕ್ರೇeóï ನೋಡಿದರೆ, ವಿಕ್ರಾಂತ್ ರೋಣ ಕನ್ನಡದಲ್ಲಿ ಎಲ್ಲ ಕೋನದಿಂದಲೂ ದಾಖಲೆ ನಿರ್ಮಿಸೋದು ಗ್ಯಾರೆಂಟಿ. ರಂಗಿತರಂಗ ಖ್ಯಾತಿಯ ಅನೂಪ್ ಬಂಢಾರಿ ಹೊಸ ಬಗೆಯ ಸಿನಿಮಾದಿಂದ ಎಲ್ಲರನ್ನೂ ಅಚ್ಛರಿಗೊಳಿಸಿದವರು. ವಿಕ್ರಾಂತ್ ರೋಣ ಅನೂಪ್ ಅವರನ್ನು ಗ್ಲೋಬಲ್ ಲೆವೆಲ್ಲಿನಲ್ಲಿ ರೀಚ್ ಮಾಡಿಸುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ.
No Comment! Be the first one.