ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಹೆಸರಿನ ಸಿನಿಮಾ ಇವತ್ತು ಬಿಡುಗಡೆಯಾಗಿದೆ. ಈ ಸಿನಿಮಾಗೆ ಆಂಧ್ರ ಮೂಲದ ಚಕ್ರವರ್ತಿ ಸಿ ಹೆಚ್ ನಿರ್ಮಾಪಕ. ಆರಂಭದಲ್ಲಿ ಸಿನಿಮಾ ವಿತರಕ ಬೆಂಗಳೂರು ಕುಮಾರ್ ಈ ಚಿತ್ರಕ್ಕೆ ಪಾರ್ಟ್ನರ್ ಆಗಿದ್ದರು. ಇದೇ ನೆಪದಲ್ಲಿ ಚಕ್ರಿ ಚೆನ್ನೈನ ಮಾರ್ವಾಡಿ ಸಂಜಯ್ ಲಾಲ್ವಾನಿ ಎಂಬಾತನ ಬಳಿ ಐವತ್ತು ಲಕ್ಷ ಫೈನಾನ್ಸ್ ಎತ್ತಿದ್ದ.
ಈಗ ಸಿನಿಮಾ ರಿಲೀಸ್ ಆಗಬೇಕೆಂದರೆ ನನಗೆ ಎಪ್ಪತ್ತೈದು ಲಕ್ಷ ಸೆಟಲ್ ಮಾಡಿ ಅಂತಾ ಸೇಠು ಲಾಲ್ವಾನಿ ಅಡ್ಡಗಾಲಾಕಿದ್ದ. ಎನ್ ಓ ಸಿ ಇಲ್ಲದಿದ್ದರೆ ಯು ಎಫ್ ಓ, ಕ್ಯೂಬ್ ನವರು ಯಾವ ಕಾರಣಕ್ಕೂ ಸಿನಿಮಾವನ್ನು ಪ್ರದರ್ಶಿಸೋದಿಲ್ಲ. ಇಂದು ಬೆಳಿಗ್ಗೆ ಶ್ಯಾಡೋ ರಿಲೀಸಾಗಲಿದೆ ಅಂತಾ ಮರಿ ಟೈಗರ್ ಅಭಿಮಾನಿಗಳೆಲ್ಲಾ ಥಿಯೇಟರುಗಳ ಮುಂದೆ ಕಟೌಟಿಗೆ ಅಲಂಕಾರ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಗಂಟೆ ಹನ್ನೊಂದಾದರೂ ಟಿಕೇಟ್ ಕೂಡಾ ನೀಡಿರಲಿಲ್ಲ. ಮಾರ್ವಾಡಿಗೆ ಹಣ ಟ್ರಾನ್ಸ್ಫರ್ ಆದ ನಂತರ, ವಕೀಲರಿಂದ ಅಫಿಷಿಯಲ್ಲಾದ ಕ್ಲಿಯರೆನ್ಸ್ ಸಿಕ್ಕಮೇಲೆ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತು. ಅಷ್ಟರಲ್ಲಾಗಲೇ ಸಿನಿಮಾ ನೋಡಲು ಥಿಯೇಟರ್ ಕಡೆ ಬಂದಿದ್ದವರಲ್ಲಿ ಅರ್ಧದಷ್ಟು ಜನ ಜಾಗ ಖಾಲಿ ಮಾಡಿದ್ದರು!
ಮೊದಲೇ ಕೊರೊನಾ ಎಫೆಕ್ಟಿನಿಂದ ಜನ ಚಿತ್ರಂಮದಿರಗಳತ್ತ ಸುಳಿದಾಡುತ್ತಿಲ್ಲ. ಹೀಗಿರುವಾಗ ಚಕ್ರಿ ಥರದವರು ಮಾಡುವ ಫ್ರಾಡು ಕೆಲಸಕ್ಕೆ ಸಿನಿಮಾದ ಕಲಾವಿದ, ತಂತ್ರಜ್ಞರು ತತ್ತರಿಸುತ್ತಾರೆ.
ಟೋಲ್ ಮಾಲೀಕತ್ವ ಹೊಂದಿರುವ ಆಂಧ್ರದ ಚಕ್ರವರ್ತಿಯಂತಾ ನಿರ್ಮಾಪಕರಿಗೆ ಸಿನಿಮಾ ಮಾಡಬೇಕು ಅನ್ನೋ ಬಯಕೆ ಇರೋದೇನೋ ಸರಿ. ಕೋಟಿಗಟ್ಟಲೇ ಖರ್ಚು ಮಾಡಿರುವ ಸಿನಿಮಾಗೆ ನಯಾಪೈಸೆಯ ಪಬ್ಲಿಸಿಟಿಯೂ ಸಿಕ್ಕಿಲ್ಲ. ಈಗ ರಿಲೀಸು ಕೂಡಾ ಟೈಮಿಗೆ ಸರಿಯಾಗಿ ಆಗಿಲ್ಲ….
No Comment! Be the first one.