ವಿನೋದ್ ಪ್ರಭಾಕರ್ ಇತ್ತೀಚಿನ ದಿನಗಳಲ್ಲಿ ಕಟ್ಟುಮಸ್ತಾದ ದೇಹಸಿರಿಯ ಮೂಲಕವೇ ಭಾರೀ ಸುದ್ದಿಗೆ ಗ್ರಾಸವಾಗಿದ್ದರು. ಕನ್ನಡದಲ್ಲಿ ಹೀರೋಗಳು ಬಾಡಿಬಿಲ್ಡ್ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳೋದು ಕಡಿಮೆ. ಅಂಥಾದ್ದರಲ್ಲಿ ವಿನೋದ್ ಈ ಪಾಟಿ ಬಾಡಿ ಬಿಲ್ಡ್ ಮಾಡಿಕೊಂಡು ಮಿಂಚಿದರೆ ಅಚ್ಚರಿಯಾಗೋದು ಸಹಜವೇ!
ಅವರು ಹಾಗೆ ದೇಹವನ್ನು ತಿದ್ದಿ ತೀಡಿ ರೂಪಿಸಿಕೊಂಡಿದ್ದದ್ದು ಫೈಟರ್ ಚಿತ್ರಕ್ಕಾಗಿ. ನೂತನ್ ಉಮೇಶ್ ನಿರ್ದೇಶನದ ಈ ಚಿತ್ರದಲ್ಲಿ ವಿನೋದ್ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಫೈಟರ್ ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಳ್ಳೋ ಹಂತ ತಲುಪಿಕೊಂಡಿದೆ.
ಫೈಟರ್ ಪ್ರೇಮಕಥೆಯೊಂದಿಗೇ ಮಾಸ್ ಅಂಶಗಳು ಪ್ರಧಾನವಾಗಿರೋ ಚಿತ್ರ. ಇದರಲ್ಲಿ ಕುರಿಪ್ರತಾಪ್ ಮುಂತಾದವರು ಮರಿ ಟೈಗರ್ಗೆ ಸಾಥ್ ನೀಡಿದ್ದಾರೆ. ಹಾಗೆ ನೋಡಿದರೆ ಈ ವರ್ಷ ವಿನೋದ್ ಪ್ರಭಾಕರ್ ಅವರ ಸಿನಿಮಾ ಹಬ್ಬವೇ ನಡೆಯಲಿದೆ. ಯಾಕೆಂದರೆ ಅವರು ನಟಿಸಿರೋ ಸಾಲು ಸಾಲು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲಿವೆ.
ರಗಡ್, ಶ್ಯಾಡೋ ಮುಂತಾದ ಚಿತ್ರಗಳೂ ಕೂಡಾ ಚಿತ್ರೀಕರಣ ಮುಗಿಸಿಕೊಂಡಿವೆ. ಟೈಗರ್ ಪ್ರಭಾಕರ್ ಮಗನೆಂಬ ಪ್ರಭೆಯಾಚೆಗೂ ನಟನಾಗಿ ನೆಲೆ ನಿಂತಿರುವವರು ವಿನೋದ್ ಪ್ರಭಾಕರ್. ಈ ಬಾರಿ ಸಾಲು ಸಾಲು ಚಿತ್ರಗಳ ಜೊತೆಗೆ ಸರಣಿ ಗೆಲುವೂ ಅವರದ್ದಾಗೋ ಸೂಚನೆಗಳಿವೆ.
No Comment! Be the first one.