ನಾಡಿಗರ್ ಸಂಗಮ್ ನ ಪ್ರಸ್ತುತ ಅಧ್ಯಕ್ಷರಾಗಿರುವ ನಟ ವಿಶಾಲ್, ಸಂಘಕ್ಕೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ನಕಲು ಮಾಡಿ ಲಪಟಾಯಿಸಿದ ಆರೋಪವನ್ನು ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯ ಮೇಲೆ ಮಾಡುತ್ತಿದ್ದಾರೆ. ಈ ಹಿಂದೆ ನಟ ಶರತ್ ಕುಮಾರ್ ಈ ಸಂಘದ ಅಧ್ಯಕ್ಷರಾಗಿದ್ದು, ರಾಧಾ ರವಿ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಆರೋಪವೂ ಸಾಬೀತಾದ ಪಕ್ಷದಲ್ಲಿ ತನಿಖೆಯನ್ನು ಕೈ ಗೊಳ್ಳಲಾಗುತ್ತದೆ ಎಂದು ಕೆಲ ತಿಂಗಳುಗಳ ಹಿಂದೆ ಕೋರ್ಟ್ ಸಹ ತಿಳಿಸಿತ್ತು.
ಇತ್ತೀಚಿಗೆ ಪುನಃ ಈ ಕೇಸಿನ ಕುರಿತಾಗಿ ಬಿಸಿ ಬಿಸಿ ಸುದ್ದಿ ಕೇಳಿ ಬರುತ್ತಿದ್ದು, ಕಾಂಚೀಪುರ ಕ್ರೈಂ ಬ್ರಾಂಚ್ ಅಗತ್ಯ ಬಿದ್ದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಲು ಆದೇಶ ನೀಡಿದೆ. ಈ ಕುರಿತಾಗಿ ಕಾಲಿವುಡ್ ನಲ್ಲಿ ಗುಸು ಗುಸು ಶುರುವಾಗಿದ್ದು, ಶರತ್ ಕುಮಾರ್ ಮತ್ತು ರಾಧಾರವಿಗೆ ಬಂಧನ ಆಗಬಹುದೆಂದು ಮಾತನಾಡಿಕೊಳ್ಳುತ್ತಿದ್ದಾರೆ.
No Comment! Be the first one.