ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್​ ಒಡೆತನದ ಪ್ರೊಡಕ್ಷನ್ ಹೌಸ್ ‘ವಿಶಾಲ್ ಫಿಲ್ಮ್​ ಫ್ಯಾಕ್ಟರಿ’ ವಿರುದ್ಧ ತೆರಿಗೆ ಇಲಾಖೆ ಕಾನೂನು ಸಮರ ಸಾರಿದೆ. ಈ ಸಂಸ್ಥೆಯ ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಿರುವ ಟಿಡಿಎಸ್​​ ಹಣವನ್ನು ಕಳೆದ ಐದು ವರ್ಷದಿಂದ ಸರ್ಕಾರಕ್ಕೆ ಪಾವತಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಆದಾಯ ತೆರೆಗೆ ಇಲಾಖೆ ಚೆನ್ನೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್- IIನಲ್ಲಿ ವಿಶಾಲ್ ವಿರುದ್ಧ ಧಾವೆ ಹೂಡಿತ್ತು.

ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ನೀಡಿದ ನೋಟಿಸ್​​ಗೆ ವಿಶಾಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ವಿಚಾರಣೆಗೆ ಪದೇ ಪದೆ ಗೈರು ಆಗುತ್ತಿರುವ ವಿಶಾಲ್ ವಿರುದ್ಧ ಗರಂ ಆಗಿರುವ ನ್ಯಾಯಾಧೀಶೆ ಎಸ್​.ಮಲರ್​ ಮತಿ ಜಾಮೀನು ರಹಿತ ಬಂಧನದ ವಾರೆಂಟ್​ ಹೊರಡಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೋಮಾಲಿ ಮೇಲೆ ರಜನಿ ಫ್ಯಾನ್ಸ್ ಗರಂ!

Previous article

ತುಘಲಕ್ ದರ್ಬಾರ್ ಚಿತ್ರದಲ್ಲಿ ಅದಿತಿ ರಾವ್ ಹೈದರಿ!

Next article

You may also like

Comments

Leave a reply

Your email address will not be published. Required fields are marked *