ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ವಿಶಾಲ್ ರವರು ಮತ್ತು ಸಂಬಂಧಪಟ್ಟವರ ಕೋರಿಕೆಯಂತೆ ತಮಿಳು ನಾಡಿಗೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡುವ ಕುರಿತು ಸಲ್ಲಿಸಿರುವ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದೆ. ಪ್ರಸ್ತುತ ಅಧಿಕಾರದಲ್ಲಿರುವ ಅಧಿಕಾರಿ ಪ್ರಸ್ತುತ ತಮಿಳು ನಾಡಿನ ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ.
ಅಲ್ಲದೇ ಟಿ,.ಎ.ಪಿ.ಸಿ ವ್ಯವಹಾರಗಳಲ್ಲಿ ತಮಿಳು ನಾಡು ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸುತ್ತಿಲ್ಲ ಎಂಬ ಆರೋಪದ ಮೇಲೆ ಈ ಬದಲಾವಣೆಯ ಮನವಿಯನ್ನು ಸಲ್ಲಿಸಲಾಗಿತ್ತು. ಟಿ.ಎ.ಪಿ. ಸಿ ವ್ಯವಹಾರಗಳಲ್ಲಿ ತಮಿಳು ನಾಡು ಸರಕಾರದ ಮಧ್ಯ ಪ್ರವೇಶವನ್ನು ಪ್ರಶ್ನಿಸಿ ವಿಶಾಲ್ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಯನ್ನು ಸ್ವತಃ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿರುವುದು ವಿಶಾಲ್ ಮತ್ತು ಅವರ ಬೆಂಬಲಿಗರಿಗೆ ಎದುರಾಗುವ ಪ್ರಮುಖ ಹಿನ್ನೆಡೆ ಎಂದು ಪರಿಗಣಿಸಲಾಗಿದೆ.
No Comment! Be the first one.