ಗಂಡುಗಲಿ ಕೆ ಮಂಜು ನಿರ್ಮಾಣದ ಹೊಸಾ ಸಿನಿಮಾ ‘ವಿಷ್ಣುಪ್ರಿಯ. ಪಡ್ಡೆಹುಲಿ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆದ ಶ್ರೇಯಸ್ ನಟನೆಯ ಎರಡನೇ ಸಿನಿಮಾ ವಿಷ್ಣುಪ್ರಿಯ. ಈ ಚಿತ್ರಕ್ಕಾಗಿ ಮೂ ಜುಮ್ಮೆನಿಸುವ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗಿದೆ. ‘ವಿಷ್ಣುಪ್ರಿಯ ಚಿತ್ರಕ್ಕಾಗಿ ಕಳೆದ ೧೦ ದಿನಗಳಿಂದ ಸಾಹಸ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣ ಕೂಡಾ ನಡೆಸಲಾಗಿದೆ.

ಮಲಯಾಳಂ ಚಿತ್ರಗಳಲ್ಲಿ ಹೆಸರು ಮಾಡಿರುವ, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಈ ಚಿತ್ರದ ಕಥಾ ನಾಯಕಿ. ಕೊಚ್ಚಿಯ ‘ಆದ್ರಪಲ್ಲಿ ಜಲಪಾತದ ಸುತ್ತ ಮುತ್ತ ಒಂದು ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಮಹಾ ಗಣಿ ಅರಣ್ಯದ ಹಿನ್ನೆಲೆಯಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಸಾಹಸ ದೃಶ್ಯದಲ್ಲಿ ೫೦ ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು. ಖ್ಯಾತ ಸಾಹಸ ನಿರ್ದೇಶಕ ವಿಕ್ರಮ್ ವಿನೂತನ ಶೈಲಿಯಲ್ಲಿ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಿರ್ದೇಶಕ ವಿ ಕೆ ಪ್ರಕಾಶ್ ಈ ‘ವಿಷ್ಣುಪ್ರಿಯ ಚಿತ್ರದ ನಿರ್ದೇಶಕರು. ಚಿತ್ರ ಈಗ ಕೊನೆಯ ಹಂತದ ಚಿತ್ರೀಕರಣಕ್ಕೆ ತಲುಪಿದೆ. ಮಲಯಾಳಿ ಚೆಲುವೆ ಪ್ರಿಯ ವಾರಿಯರ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ‘ವಿಷ್ಣುಪ್ರಿಯ ಧಾರವಾಡದ ಸಿಂಧು ಅವರ ಕತೆಯಾಧಾರಿತ ಸಿನಿಮಾ. ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ, ಮೋಹನ್ ಪಂಡಿತ್ ಕಲಾ ನಿರ್ದೇಶನ, ವಿನೋದ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚೇಂದ್ರ ಪ್ರಸಾದ್, ನವೀನ್ ಪಡಿಯಾಲ್ ಹಾಗೂ ಇತರರು ಇದ್ದಾರೆ.

ಸದ್ಯ ಮೈಸೂರು ಚಾಮುಂಡಿ ಬೆಟ್ಟ ಸೇರಿದಂತೆ ಹಲವಾರು ಕಡೆ ಚಿತ್ರೀಕರಣ ನಡೆಸಲಾಗಿದೆ. ಇನಬ್ನು ಒಂದೇ ಒಂದು ದಿನದ ಶೂಟಿಂಗ್ ಮುಗಿದರೆ ಸಿನಿಮಾ ಕಂಪ್ಲೀಟ್ ಆಗಲಿದೆ. ಇಷ್ಟರಲ್ಲೇ ಚಿತ್ರದ ಪೋಸ್ಟರ್ ಹೊರಬರಲಿದ್ದು, ಜನವರಿ ವೇಳೆಗೆ ಆಡಿಯೋ ಮತ್ತು ಟೀಸರ್ ಅನಾವರಣಗೊಳ್ಳಲಿದೆ.

CG ARUN

ಬಂಡಿಮಾಂಕಾಳಮ್ಮನ ಗುಡಿಗೆ ಬರ್ತಾರೆ ಬಾಸ್!

Previous article

ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್ ಹೀರೋ.

Next article

You may also like

Comments

Leave a reply

Your email address will not be published. Required fields are marked *