ಇತ್ತೀಚಿಗೆ ವಿವೇಕ್ ಒಬೆರಾಯ್ ಅನಗತ್ಯ ವಿಚಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರನ್ನ ಅಣಕಿಸಿ ಟ್ವೀಟ್ ಮಾಡಿ ಫ್ಯಾನ್ಸ್ ನಿಂದ ಮುಖಕ್ಕೆ ಉಗಿಸಿಕೊಂಡಿದ್ದರು.
This is what happened to Indian fans in the #WC semi finals! #CWC19 #WorldCupSemiFinal #INDvsNZ #indiavsNewzealand pic.twitter.com/JuayObK02R
— Vivek Anand Oberoi (@vivekoberoi) July 12, 2019
ಕಳೆದ ವಿಶ್ವಕಪ್ ಪಂದ್ಯದ ಸೋಲಿನ ಕುರಿತಾಗಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಗಳನ್ನ ಅಣಕಿಸುವ ರೀತಿಯಲ್ಲಿ GIF ಒಂದನ್ನ ಹಾಕಿ ಟ್ವೀಟ್ ಮಾಡಿ ಮತ್ತೆ ಕಮೆಂಟಿಗರಿಗೆ ಆಹಾರವಾಗಿದ್ದಾರೆ. ಆ GIF ನಲ್ಲಿ ಭಾರತೀಯ ಅಭಿಮಾನಿಯೊಬ್ಬರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಇವರ ಎದುರು ಮಹಿಳೆ ಒಬ್ಬರು ಬರುತ್ತಿರೋದನ್ನ ನೋಡುತ್ತ ತನ್ನನ್ನ ತಬ್ಬಿಕೊಳ್ಳಬಹುದು ಅಂತಾ ಯೋಚಿಸುತ್ತಿರುತ್ತಾರೆ. ಆದರೆ ಆ ಮಹಿಳೆ ಆತನ ಹಿಂದೆ ನಡೆದುಕೊಂಡು ಬರುತ್ತಿರೋ ವ್ಯಕ್ತಿಯನ್ನ ತಬ್ಬಿಕೊಂಡಿದ್ದಾಳೆ. ಈ GIF ಅನ್ನು ಅಪ್ಲೋಡ್ ಮಾಡಿರುವ ವಿವೇಕ್ ಒಬೆರಾಯ್, ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತೀಯ ಅಭಿಮಾನಿಗಳಿಗೆ ಹೀಗಾಯಿತು! ಅಂತಾ ಅಭಿಮಾನಿಗಳ ಅಣಕಿಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
No Comment! Be the first one.