ತಾರಾ ಹೋಟೆಲ್ಲುಗಳ ನಂಬರ್ ಒನ್ ಶೆಪ್ ಆಗಿಯೇ ಪ್ರಖ್ಯಾತರಾಗಿದ್ದವರು ಅಶ್ವಿನ್ ಕೊಡಂಗೆ. ಇದಕ್ಕಾಗಿ ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದ ಅವರು ಸಿನಿಮಾದತ್ತ ಆಕಷೀತರಾಗಿ ಈ ಕ್ಷೇತ್ರಕ್ಕೆ ಅಡಿಯಿರಿಸಿ ಎಂಟು ವರ್ಷಗಳೇ ಕಳೆದಿವೆ. ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಅವರ ಸ್ವಾರ್ಥರತ್ನ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ರೌನಿಂಗ್ ಹಾರ್ಸ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಸ್ವಾರ್ಥರತ್ನ ನಾಳೆ ರಾಜ್ಯಾರ್ಧಯಂತ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಆದರ್ಶ್ ಭಾರಧ್ವಾಜ್ ಮತ್ತು ಇಶಿಕಾ ವರ್ಷ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ತಮ್ಮ ಶೆಪ್ ವೃತ್ತಿಯನ್ನು ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದ ಅಶ್ವಿನ್ ಫಸ್ಟ್ ರ್ಯಾಕ್ ರಾಜು ಮತ್ತು ಕನ್ನಡ ಮೀಡಿಯಂ ರಾಜು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇದೇ ಹೊತ್ತಿನಲ್ಲಿ ಹಿಂದಿ ಮತ್ತು ತೆಲುಗು ಚಿತ್ರಗಳಿಗೂ ಸಂಭಾಷಣೆ ಬರೆದಿದ್ದರು. ಹೀಗೆ ವರ್ಷಾಂತರಗಳ ಕಾಲ ಅನುಭವ ತುಂಬಿಕೊಂಡ ಅವರು ಶೀರ್ಷಿಕೆಯಲ್ಲಿಯೇ ಗಮನ ಸೆಳೆಯುವ ಸ್ವಾರ್ಥರತ್ನ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ಭರತ್ ಬಿ ಜೆ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ನಡುವೆ ಗುನುಗಿಸಿಕೊಳ್ಳುತ್ತಿವೆ. ಇಂಥಾದ್ದರ ಮೂಲಕವೇ ಪ್ರೇಕ್ಷಕರನ್ನೂ ಆಕರ್ಷಿಸಿಕೊಂಡಿದೆ. ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್ ಮುಂತಾದವರು ಹಾಡಿರೋ ಹಾಡುಗಳು ಆರಂಭದಲ್ಲಿಯೇ ಟ್ರೆಂಡಿಂಗ್ನಲ್ಲಿದ್ದವು. ಎಂತೆಂಥಾ ಕಥಾ ಹಂದರದ ಚಿತ್ರಗಳು ಬರುತ್ತಿವೆ ಎಂಬುದರತ್ತ ಕಾಲಾಂತರಗಳಿಂದಲೂ ಕಣ್ಣಿಟ್ಟಿದ್ದ ಅಶ್ವಿನ್, ಹೊಸಾ ಥರದ ಕಥೆಯೊಂದರ ಹಂಬಲದಿಂದಲೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.ಸದ್ಯ ಹೊಸಾ ಅಲೆಯೊಂದಕ್ಕೆ ರೂವಾರಿಯಾಗಿರೋ ಸ್ವಾರ್ಥರತ್ನ ನಾಳೆ ರಾಜ್ಯಾಧ್ಯಂತ ಬಿಡುಗಡೆಗೊಳ್ಳಲಿದೆ.
#
No Comment! Be the first one.