ವೆಡ್ಡಿಂಗ್ ಗಿಫ್ಟ್ ಚಿತ್ರದ ಹೈಲೈಟ್ ಎಂದರೆ ಪ್ರೇಮ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಕೆಲವು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆಗೆ ಉಪೇಂದ್ರ ಮತ್ತೆ ಬಾ ಎಂಬ ಚಿತ್ರದಲ್ಲಿ ನಟಿಸಿದ್ದ ಅವರು, ಆ ನಂತರ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ಅವರು ಬಹಳ ಚ್ಯೂಸಿ. ಅವಕಾಶಗಳು ಸಿಕ್ಕಾಪಟ್ಟೆ ಸಿಗುತ್ತವಾದರೂ, ಪಾತ್ರ ವಿಭಿನ್ನವಾಗಿದೆ ಎಂದನಿಸಿದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ. ವೆಡ್ಡಿಂಗ್ ಗಿಫ್ಟ್ ಚಿತ್ರವನ್ನು ಸಹ ಅವರರು ಅದೇ ಕಾರಣಕ್ಕೆ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾತನಾಡುವ ಅವರು, ಕಥೆ ಕೇಳಿದಾಗ ವಿಭಿನ್ನ ಎಂದನಿಸಿತು. ಒಳ್ಳೆಯ ಸಂದೇಶವೂ ಇತ್ತು. ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದೇನೆ. ಕೋರ್ಟ್ ಹಾಲ್ನ ನಾನು ಆ ತರಹ ನೋಡಿದ್ದು ಅದೇ ಮೊದಲು. ನಿರ್ದೇಶಕರು ಸಮಯ ಕೊಟ್ಟು, ಇದೇ ರೀತಿ ಮಾಡಿ ಅಂದರು. ಮೊದಲಿಗೆ ಈ ಪಾತ್ರ ಹೇಗೆ ಮೂಡಿಬರುತ್ತದೋ ಎಂಬ ಭಯ ಇತ್ತು. ಆದರೆ, ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದೇನೆ. ನಾನು ಯಾವುದೇ ಸಿನಿಮಾಗಳಿಂದ ಅಥವಾ ಕಲಾವಿದರಿಂದ ಸ್ಫೂರ್ತಿ ಪಡೆದಿಲ್ಲ. ಆ ಕ್ಷಣಕ್ಕೆ ಏನನ್ನಿಸುತ್ತದೋ ಅದನ್ನು ಮಾಡುವವಳು ನಾನು. ಯಾವತ್ತೂ ಕಾಪಿ ಹೊಡೆದಿಲ್ಲ. ಈ ಚಿತ್ರದಲ್ಲೂ ನಾನು ಆದಷ್ಟು ಸ್ಪಾಂಟೇನಿಯಸ್ ಆಗಿ ಇರುವುದಕ್ಕೆ ಪ್ರಯತ್ನಿಸಿದ್ದೇನೆ. ನಿರ್ದೇಶಕರು ಹೇಳಿದ್ದನ್ನು ಗ್ರಹಿಸಿಕೊಂಡು ಅವರಿಗೆ  ಯಾವ ರೀತಿ ಬೇಕೋ, ನನ್ನ ಸ್ಟೈಲ್ನಲ್ಲಿ ಮಾಡುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಕೆಲಸದ ಒತ್ತಡ ಇರಲಿಲ್ಲ. ಬಹಳ ನೀಟ್ ಆಗಿ, ನಿರ್ದೇಶಕರಿಗೆ ಏನು ಬೇಕಿತ್ತೋ, ಅದನ್ನು ನಮ್ಮಿಂದ ತೆಗೆಸಿದ್ದಾರೆ. ಅವರ ಜತೆಗೆ ಕೆಲಸ ಮಾಡಿದ ಖುಷಿಯಾಯಿತು ಎನ್ನುತ್ತಾರೆ.

ನಿರ್ದೇಶಕ ವಿಕ್ರಂ ಪ್ರಭುಗೂ ಚಿತ್ರ ಚೆನ್ನಾಗಿ ಮೂಡಿಬಂದಿರುವ ಖುಷಿ ಇದೆ. ಅಷ್ಟೇ ಅಲ್ಲ, ಅಂದುಕೊಂಡಿದ್ದಕ್ಕಿಂತ ಒಂದು ದಿನ ಮುಂಚೆಯೇ ಅವರು ತಮ್ಮ ಕೆಲಸವನ್ನು ಮುಗಿಸಿದ್ದಾರಂತೆ. 2021ರ ನವೆಂಬರ್ 15ರಂದು ಚಿತ್ರೀಕರಣ ಪ್ರಾರಂಭವಾಯಿತು. ಡಿಸೆಂಬರ್ 30ಕ್ಕೆ ಚಿತ್ರೀಕರಣ ಮುಕ್ತಾಯವಾಯಿತು. ಇದೊಂದು ಗಂಡ-ಹೆಂಡತಿಯ ನಡುವೆ ಕಥೆ. ಥ್ರಿಲ್ಲರ್ ಜಾನರ್ನ ಚಿತ್ರ. ಇವತ್ತಿನ ಕಾಲಘಟ್ಟಕ್ಕೆ ಹೊಂದುವ ಕಥೆ. ಬಹಳಷ್ಟು ಜನ ರಿಲೇಟ್ ಮಾಡಿಕೊಳ್ಳಬಹುದು. ಕೌಟುಂಬಿಕ ಹಿಂಸೆ ಇತ್ತೀಚೆಗೆ ಬಹಳ ಹೆಚ್ಚಾಗುತ್ತಿದೆ. ಅದನ್ನು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ ಎನ್ನುತ್ತಾರೆ ವಿಕ್ರಂ ಪ್ರಭು.

ಈ ಚಿತ್ರದ ಮೂಲಕ ಅವರು ಸೆಕ್ಷನ್ 498ಎ ಎಂಬ ಕಾನೂನಿನ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ. ಕೌಟುಂಬಿಕ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ರೂಪಿತವಾಗಿರುವ ಒಂದು ಕಾನೂನು ಇದು. ಇದನ್ನು 1983ರಲ್ಲಿ ಜಾರಿಗೆ ತರಲಾಯಿತು. ಇದನ್ನು ತಂದಿದ್ದೇ ಹೆಣ್ಮಕ್ಕಳ ರಕ್ಷಣೆಗಾಗಿ. ವರದಕ್ಷಿಣೆ, ಹಿಂಸೆ ನಿಲ್ಲಿಸುವುದಕ್ಕೆ ಈ ಕಾನೂನನ್ನು ರೂಪಿಸಲಾಯಿತು. ಆದರೆ, ಕ್ರಮೇಣ ಇದು ಮಿಸ್ಯೂಸ್ ಆಯಿತು. ಇದನ್ನು ಹೆಣ್ಮಕ್ಕಳು ಬ್ಲಾಕ್ಮೇಲ್ ಮಾಡುವುದಕ್ಕೆ ಕ್ರಮೇಣ ಬಳಸಿಕೊಂಡರು. ಇದರಿಂದಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಅದನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ. ಇದೊಂದು ಕೋರ್ಟ್ ರೂಂ ಡ್ರಾಮಾ. ಇದೊಂದು ರಿವೆಂಜ್ ಡ್ರಾಮಾ. ಗಂಡ-ಹೆಂಡತಿಯ ಮಧ್ಯೆ ಏನಾಗುತ್ತದೆ. ಯಾರು, ಯಾರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದು ಈ ಚಿತ್ರದ ಕಥೆ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.

ನಿಶಾನ್ ನಾಣಯ್ಯ, ಸೋನು ಗೌಡ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವೆಡ್ಡಿಂಗ್ ಗಿಫ್ಟ್ ಜುಲೈ 08ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ಗಿರ್ಕಿ’ ಹೊಡೆಸುವ ಟ್ರೇಲರ್ ಬಿಡುಗಡೆ ಆಯ್ತು

Previous article

ತೂತು ಮಡಿಕೆಯಲ್ಲೊಂದು ಕಾಣೆಯಾದ ವಿಗ್ರಹ…!

Next article

You may also like

Comments

Comments are closed.