ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾಗಳಲ್ಲಿ ನಟನೆ ಆರಂಭಿಸಿ, ನಂತರ ಸ್ವಂತ ಉದ್ಯಮಗಳನ್ನು ಆರಂಭಿಸಿ ಅದರಲ್ಲೂ ಗೆದ್ದು ಅದರ ಜೊತೆ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಆರಂಭಿಸಿದವರು ಮಂಜುನಾಥ್ ಡಿ. ಇವರು ತಮ್ಮ ಮಯೂರ ಮೋಷನ್ ಪಿಕ್ಚರ್ಸ್ ಸಂಸ್ಥೆಯಿಂದ ನಿರ್ಮಿಸಿರುವ, ಸುರೇಶ್ ಶೃಂಗೇರಿ ನಿರ್ದೇಶನದ `ವೀಕ್ ಎಂಡ್’ ಚಿತ್ರವೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಟೆಕ್ಕಿಗಳ ಬಗೆಗಿನ ಸಿನಿಮಾ ಎಂಬುದರಿಂದ ಹಿಡಿದು `ವೀಕ್ ಎಂಡ್’ ಬಗ್ಗೆ ಜನ ಮಾತಾಡುತ್ತಿರೋದಕ್ಕೆ ನಾನಾ ಕಾರಣಗಳಿವೆ. ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರ `ವೀಕ್ ಎಂಡ್’. ನಮಗೆ ಗೊತ್ತಿದ್ದೂ ಕಾಣದಿರೋವಂಥಾ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಮೈನವಿರೇಳಿಸೋ ಸಾಹಸ ಸನ್ನಿವೇಶಗಳೂ ಇರೋದು ವಿಶೇಷ.

ಕ್ಷಣ ಕ್ಷಣವೂ ಕುತೂಹಲ ಕೆರಳಿಸುವಂತೆ ಮೂಡಿ ಬಂದಿರೋ ಈ ಚಿತ್ರದಲ್ಲಿ ಒಂದು ಫೈಟ್ ಮತ್ತು ರೋಚಕ ಛೇಸಿಂಗ್ ಸೀನುಗಳಿವೆಯಂತೆ. ಇದನ್ನು ವಿಶೇಷವಾಗಿ ಮೂಡಿ ಬರುವಂತೆ ಮಾಡಲು ಫೈಟ್ ಮಾಸ್ಟರ್ ಗಳಾದ ಚಂದ್ರು ಬಂಡೆ ಮತ್ತು ಚೇತನ್ ಡಿಸೋಜಾ ಶ್ರಮ ಹಾಕಿದ್ದಾರೆ. ಇವರಿಬ್ಬರೂ ಚೇಸಿಂಗ್ ಮತ್ತು ಫೈಟ್ ಸೀನುಗಳನ್ನು ಭಿನ್ನವಾಗಿಯೇ ಕಟ್ಟಿ ಕೊಟ್ಟಿದ್ದಾರಂತೆ. ಹೈ ಫೈ ಬದುಕಿನ ಭಾಗದಂಥಾ `ವೀಕ್ ಎಂಡ್’ ಮೋಜು ಮಸ್ತಿಯ ಸುತ್ತಾ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆ. ಕೊಂಚ ಎಚ್ಚರ ತಪ್ಪಿದರೆ ಯಾವ್ಯಾವ ಅನಾಹುತಗಳಾಗುತ್ತವೆ, ಯಾವ್ಯಾವ ಮಾಯೆಗಳು ಸೆಳೆದುಕೊಳ್ಳುತ್ತವೆ ಎಂಬಂಥಾ ಬೆಚ್ಚಿ ಬೀಳಿಸೋ ಅಂಶಗಳನ್ನೂ `ವೀಕ್ ಎಂಡ್’ ಒಳಗೊಂಡಿದೆ. ಒಟ್ಟಾರೆಯಾಗಿ ಇದು ಯುವ ಆವೇಗವನ್ನು ಹೊಮ್ಮಿಸುತ್ತಲೇ ಸಂದೇಶವನ್ನೂ ರವಾನಿಸೋ ಚಿತ್ರ. ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಕೂಡಾ ಹೌದು.

 

ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

CG ARUN

ರತ್ನಮಂಜರಿ: ನಿರ್ದೇಶಕ ಪ್ರಸಿದ್ಧ್! ಎಲ್ಲಿಂದಲೋ ಬಂದವರು…

Previous article

ಮುಂದಿನ ತಿಂಗಳು ಉಪೇಂದ್ರ ಐ ಲವ್ ಯು ರಿಲೀಸ್!

Next article

You may also like

Comments

Leave a reply

Your email address will not be published. Required fields are marked *