ಈ ಎಂ ಎನ್ ಸಿ ಕಂಪನಿಯವರಿಗೆ, ಐಟಿ ಕಂಪನಿಯವರನ್ನು ಕೇಳಿ ನೋಡಿದರೆ ಅವರು ವಾರದ ಕಡೆ ದಿನಗಳ ವ್ಯಾಲ್ಯೂವನ್ನು ಬಿಡಿಸಿ ಹೇಳಬಲ್ಲರು. ಆ ದಿನಗಳ ಮಜಾ ಅವರಿಗೆ ಉಳಿದವರಿಗಿಂತ ಹೆಚ್ಚಾಗಿಯೇ ತಿಳಿದಿರುತ್ತದೆ. ವಾರದ ಪೂರ್ತಿ ಮೈ ಮುರಿದು ದುಡಿದ ಅವರಿಗೆ ವೀಕೆಂಡ್ ನಲ್ಲಿಯೇ ಮೋಜು, ಮಸ್ತಿಗಳನ್ನು ಮಾಡೋದಕ್ಕೆ ಅವಕಾಶ, ಅನಿವಾರ್ಯ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ವೀಕೆಂಡ್ ನದ್ದೇ ಕಾರುಬಾರು. ಆಶ್ಚರ್ಯ ಆದ್ರೂ ಅದುವೇ ಸತ್ಯ. ವೀಕೆಂಡ್ ಅನ್ನೋ ಹೊಸ ಸಿನಿಮಾ ಈಗಾಗಲೇ ಬಾರಿ ಸದ್ದು ಮಾಡಿದ್ದು, ನಾಳೆ ರಾಜ್ಯದಾದ್ಯಂತ ಲೇಟ್ ಆದ್ರೂ ಲೇಟೆಸ್ಟಾಗಿ ರಿಲೀಸ್ ಆಗುತ್ತಿದೆ. ಸಿನಿಮಾದ ಕುರಿತು ಸಾಕಷ್ಟು ಭರವಸೆ, ನಂಬಿಕೆಯನ್ನು ಮೂಡಿಸಿರುವ ಈ ಸಿನಿಮಾ ಯಶಸ್ಸಿನ ಗುರಿ ಮುಟ್ಟಬಲ್ಲದೆಂಬ ವಿಶ್ವಾಸದಲ್ಲಿ ವೀಕೆಂಡ್ ಚಿತ್ರತಂಡವಿದೆ.

ಮಯೂರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಡಿ ಮಂಜುನಾಥ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ಮುಖ್ಯ ತಾರಾಂಗಣದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ಅನಂತ್ ನಾಗ್ ಇವರಿಗೆ ಸಾಥ್ ನೀಡಿದ್ದಾರೆ. ಮೋಜಿಗಾಗಿ ವೀಕೆಂಡ್ ಆರಿಸಿಕೊಂಡು ಹೋಗುವ ಟೆಕ್ಕಿಗಳು ತಮ್ಮ ಸಂಯಮ ಕಳೆದುಕೊಂಡಲ್ಲಿ ಏನೆಲ್ಲ ಆಗಬಾರದ್ದು ಘಟಿಸಬಲ್ಲದೆಂಬುದನ್ನು ವೀಕೆಂಡ್ ಸಿನಿಮಾ ಎಳೆಯಾಗಿಟ್ಟುಕೊಂಡು ಕಮರ್ಷಿಯಲ್ ದೃಷ್ಟಿಯಿಂದ ಹಾಗೂ ಮನರಂಜನಾತ್ಮಕವಾಗಿ ಥ್ರಿಲ್ಲರ್, ಕ್ರೈಮ್ ಕಥಾ ಹಂದರದಲ್ಲಿ ತೋರಿಸಲು ಹೊರಟಿದೆ. ನಾಳೆ ರಿಲೀಸ್ ಗೆ ರೆಡಿಯಾಗಿರುವ ವೀಕೆಂಡ್ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸನ್ನು ಗಳಿಸಲೆಂದು ಹಾರೈಸೋಣ.

CG ARUN

ಠೇವಣಿ ಕಳೆದುಕೊಂಡ ನಟ ಪ್ರಕಾಶ್ ರಾಜ್!

Previous article

ಈ ವಾರ `ವೀಕ್ ಎಂಡ್’ ತೆರೆಗೆ

Next article

You may also like

Comments

Leave a reply

Your email address will not be published. Required fields are marked *