ಮೇಲ್ನೋಟಕ್ಕೆ ನೋಡಿದರೆ ಈ ಫಸ್ಟ್ ಲುಕ್ ಸುಮ್ಮನೇ ಅಂದಗಟ್ಟಿಸುವ ವಿಡಿಯೋದಂತೆ ಕಾಣುವುದಿಲ್ಲ. ಬದಲಿಗೆ ಗಹನವಾದ ಕಥೆಯೊಂದು ಈ ಟೀಸರಿನ ಮೂಲಕವೇ ತೆರೆದುಕೊಂಡಿರುವ ಸೂಚನೆಯಿದೆ. ಹುಡುಗ ಪ್ರತೀ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ. ಆ ಪ್ರದೇಶ ಹತ್ತಿರಾಗುತ್ತಿದ್ದಂತೇ ಹುಡುಗಿ ಕಾಣುತ್ತಾಳಾ ಅನ್ನೋ ತವಕ ಆತನಿಗೆ. ಬಹುಶಃ ಆ ಬಂಗಲೆಯಲ್ಲಿ ವಾಸ ಮಾಡುವ ಜೀವ ಅದಿರಬಹುದು!
ಅಂತೂ ಶೀತಲ್ ಶೆಟ್ಟಿ ವಿಂಡೋ ಸೀಟಿನ ಹುಡುಗನನ್ನು ಇಣುಕಿ ನೋಡಿಸಿದ್ದಾರೆ! ಕೆ.ಎಸ್.ಕೆ. ಶೋ ರೀಲ್ ಅರ್ಪಿಸಿ, ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಿಸಿರುವ ಚಿತ್ರ ವಿಂಡೋ ಸೀಟ್. ಈಗ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಹೊರಬಂದಿದೆ. ಇಷ್ಟು ದಿನ ಪೋಸ್ಟರುಗಳ ಮೂಲಕವೇ ಕುತೂಹಲ ಕೆರಳುವಂತೆ ಮಾಡಿದ್ದ ಶೀತಲ್ ಈ ಸಲ ಟೀಸರ್ ಮೂಲಕ ನಿಜಕ್ಕೂ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಪ್ರಕೃತಿಯ ನಡುವೆ ಹಳಿಗಳ ಮೇಲೆ ಟ್ರೇನ್ ಬರ ತೊಡಗುತ್ತದೆ. ವಿಂಡೋ ಸೀಟಿನಲ್ಲಿ ಕುಳಿತ ಹೀರೋ ನಿರೂಪ್ ಬಂಢಾರಿ. ಒಂದೇ ಕಡೆ ತದೇಕಚಿತ್ತದಿಂದ ನೋಡುತ್ತಿದ್ದಾನೆ. ಅದು ಒಂದು ಸಲವಲ್ಲ. ಪದೇ ಪದೇ ಸೀಟಿನ ವಿಂಡೋವನ್ನು ಮೇಲಕ್ಕೇರಿಸಿ ಅತ್ತ ನೋಡುತ್ತಿದ್ದಾನೆ. ಆ ಕಡೆ ಕೂದಲನ್ನು ಇಳೆಬಿಟ್ಟ ಹುಡುಗಿಯಿದ್ದಾಳೆ. ಅವಳ ಕೂದಲು ಗಾಳಿಗೆ ಹಾರಾಡುತ್ತಿದೆ. ಮಿಕ್ಕಂತೆ ಆಕೆಯ ಚಹರೆ ಅಸ್ಪಷ್ಟ. ಹಾಗೇ ಮುಂದುವರೆದು ಪರದೆಯ ತುಂಬ ಸುತ್ತ ಹಸಿರು, ತೋಟ ಮತ್ತು ಅಂಚಿನಲ್ಲೊಂದು ಬಂಗಲೆ ಅನಾವರಣವಾಗುತ್ತದೆ. – ಇದು ವಿಂಡೋ ಸೀಟ್ ಚಿತ್ರದ ಮೊದಲ ಟೀಸರಿನಲ್ಲಿ ಬಿಚ್ಚಿಕೊಂಡಿರುವ ನವ್ಯ ಚಿತ್ರಣ. ಮೇಲ್ನೋಟಕ್ಕೆ ನೋಡಿದರೆ ಈ ಫಸ್ಟ್ ಲುಕ್ ಸುಮ್ಮನೇ ಅಂದಗಟ್ಟಿಸುವ ವಿಡಿಯೋದಂತೆ ಕಾಣುವುದಿಲ್ಲ. ಬದಲಿಗೆ ಗಹನವಾದ ಕಥೆಯೊಂದು ಈ ಟೀಸರಿನ ಮೂಲಕವೇ ತೆರೆದುಕೊಂಡಿರುವ ಸೂಚನೆಯಿದೆ. ಹುಡುಗ ಪ್ರತೀ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ. ಆ ಪ್ರದೇಶ ಹತ್ತಿರಾಗುತ್ತಿದ್ದಂತೇ ಹುಡುಗಿ ಕಾಣುತ್ತಾಳಾ ಅನ್ನೋ ತವಕ ಆತನಿಗೆ. ಬಹುಶಃ ಆ ಬಂಗಲೆಯಲ್ಲಿ ವಾಸ ಮಾಡುವ ಜೀವ ಅದಿರಬಹುದು!
ಶೀತಲ್ ಶೆಟ್ಟಿ ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರು ಇದು ಹಾರರ್ ಕಥೆಯ ಚಿತ್ರವಾ? ಪ್ರೀತಿ ಪ್ರೇಮದ ಎಳೆಯ ಕಥೆ ಹೊಂದಿದೆಯಾ ಅಥವಾ ಥ್ರಿಲ್ಲರ್ ಜಾನರಿನದ್ದಾ? ಎಂಬ ಅನುಮಾನ ಹುಟ್ಟುವಂತೆ ಮಾಡಿತ್ತು. ಈಗ ಬಂದಿರುವ ವಿಂಡೋ ಸೀಟ್ನ ಟೀಸರನ್ನೊಮ್ಮೆ ನೋಡಿದರೆ, ಎಲ್ಲ ಬಗೆಯ ಕಂಟೆಂಟನ್ನೂ ಹೊಂದಿರಬಹುದು ಎನ್ನುವ ಸೂಚನೆ ಸಿಗುವಂತಿದೆ. ಒಂದು ಟೀಸರು ನೋಡಿದವರ ಮನಸ್ಸಿನಲ್ಲಿ ಅಲ್ಲಿ ಚಲಿಸುವ ರೈಲಿನಂತೆಯೇ ಇಷ್ಟೆಲ್ಲಾ ಅನಿಸಿಕೆಗಳು ಹಾದುಹೋಗುತ್ತವೆ ಅಂದರೆ ನೀವೂ ಒಂದು ಸಲ ಟೀಸರಿನತ್ತ ಕಣ್ಣಾಡಿಸೋದೊಳ್ಳೇದು..! ವಿಂಡೋ ಸೀಟ್ ಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಜ್ಞೇಶ್ ರಾಜ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ವೀರೇಶ್ ಶಿವಮೂರ್ತಿ ಸಂಭಾಷಣೆ, ಯೋಗರಾಜ್ ಭಟ್, ಕವಿರಾಜ್ ಮತ್ತು ಸುಮುಖ ಗೀತರಚನೆ, ಉಲ್ಲಾಸ್ ಕಲಾನಿರ್ದೇಶನ ಈ ಚಿತ್ರಕ್ಕಿದೆ. ನಿರೂಪ್ ಬಂಢಾರಿ, ಸಂಜನಾ ಆನಂದ್, ಅಮೃತಾ ಅಯ್ಯಂಗಾರ್, ರವಿಶಂಕರ್, ಮಧುಸೂಧನ್ ರಾವ್, ಲೇಖಾ, ಸೂರಜ್ ಮುಂತಾದವರು ವಿಂಡೋ ಸೀಟ್ ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಚಾಲ್ತಿಯಲ್ಲಿರುವ ಚಿತ್ರಮಂದಿರಗಳ ಲಾಕ್ ಡೌನ್ ಪ್ರಕ್ರಿಯೆ ಮುಗಿಯುತ್ತಿದ್ದಂತೇ ವಿಂಡೋ ಸೀಟ್ ದೊಡ್ಡ ಪರದೆ ಮೇಲೆ ತೆರೆದುಕೊಳ್ಳಲಿದೆ.
No Comment! Be the first one.