ಈಗಷ್ಟೇ ಆರಂಭವಾಗಿರುವ ವಾರ್ಡ್ ನಂ ೧೧ ಚಿತ್ರದಲ್ಲಿ ಫಸ್ಟ್ ಟೈಂ ರಾಘವೇಂದ್ರ ರಾಜ್‌ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


ಶ್ರೀಕಾಂತ್ ವಾರ್ಡ್ ನಂ ೧೧ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಹೊಂದಿದ್ದಾರೆ. ಈ ಚಿತ್ರದ ಮೂಲಕ ಕಿರುತೆರೆ ನಟ ರಕ್ಷಿತ್ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿzರೆ. ಇನ್ನು ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರಲ್ಲಿ ಒಬ್ಬರು ಮೇಘಶ್ರೀ, ಈ ಹಿಂದೆ ಕೃಷ್ಣ ರುಕ್ಮಿಣಿ ಸೇರಿ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ಮೇಘಶ್ರೀ ಇಲ್ಲಿ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಇನ್ನೊಬ್ಬ ನಾಯಕಿಯಾಗಿ ಅಮೃತ ಕಾಣಿಸಿಕೊಂಡಿದ್ದಾರೆ. ಒಂದು ಏರಿಯಾದ ವಾರ್ಡ್ ಹುಡುಕಿ ಚಿತ್ರವನ್ನು ವಿಭಿನ್ನವಾಗಿ ಶೂಟ್ ಮಾಡೋ ಪ್ಲಾನ್ ಮಾಡಿದೆ ಚಿತ್ರತಂಡ. ಈ ವೇಳೆ ಮಾತನಾಡಿದ ನಿರ್ದೇಶಕ ಶ್ರೀಕಾಂತ್, ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಹೊಂದಿದ ಚಿತ್ರ. ರಾಜಕೀಯ ಕೂಡ ಇದೆ.

ನಾಲ್ವರು ಸ್ನೇಹಿತರಲ್ಲಿ ಒಬ್ಬನ ಕೊಲೆ ಆಗುತ್ತದೆ. ಅದರ ಹಿಂದಿನ ಸತ್ಯವೇನೆಂದು ಪತ್ತೆ ಹಚ್ಚಲು ಹೋದಾಗ ಅಲ್ಲಿ ಹಲವು ರಹಸ್ಯಗಳು ಬಹಿರಂಗವಾಗುತ್ತವೆ. ಅದೇ ಈ ಚಿತ್ರದ ಕಥಾನಕ ಎಂದರು. ವಾರ್ಡ್ ನಂ ೧೧ರಲ್ಲಿ ನಡೆಯುವ ಘಟನೆಗಳು ಈ ಸಿನಿಮಾದಲ್ಲಿದೆ. ಚಿಕ್ಕ ಎಳೆ ಹೇಳಿದರೂ ಕೂಡ ಕಥೆ ಬಹಿರಂಗವಾಗುತ್ತದೆ ಎಂದರು. ಇನ್ನು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಇದು ರಾಘವೇಂದ್ರ ರಾಜ್‌ಕುಮಾರ್ ಸಿನಿಮಾವಲ್ಲ. ಆದರೆ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಇದ್ದಾರೆ. ನನ್ನ ಜೊತೆ ಇವರೆಲ್ಲ ನಟಿಸಿಲ್ಲ. ಇವರ ಜೊತೆ ನಾನು ನಟಿಸುತ್ತಿದ್ದೇನೆ. ಇದು ಪೊಲಿಟಿಕಲ್ ಕಥೆ ಹೊಂದಿರುವ ಸಿನಿಮಾವಲ್ಲ. ಆದರೆ ಸಿನಿಮಾದಲ್ಲಿ ಪೊಲಿಟಿಕಲ್ ವಿಷಯಗಳಿವೆ ಎಂದು ತಮ್ಮ ಅನುಭವದ ಮಾತುಗಳನ್ನು ಹೇಳಿದರು. ಸುಮನ್ ನಗರ್‌ಕರ್, ವಿಶ್ವಾಸ್, ಗೋವಿಂದೇಗೌಡ, ಅಮೃತಾ ಮುಂತಾದವರು ಉಳಿದ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಸಂದೀಪ್ ಮತ್ತು ಗುರುರಾಜ್ ಜತೆಯಾಗಿ ಬಂಡವಾಳ ಹೂಡುತ್ತಿದ್ದಾರೆ.

CG ARUN

ನಾನೇ ರಾಜ ಅಂದವರು ಯಾರು ಗೊತ್ತಾ?

Previous article

ಅವಂತಿಕಾ ಆಡಿಯೋ ಬಂತು!

Next article

You may also like

Comments

Leave a reply

Your email address will not be published. Required fields are marked *