ಬದುಕಿನಲ್ಲಿ ಬೇಸರವಾದರೆ ಹೊಸದನ್ನು ಹುಡುಕುವ ಪ್ರಯತ್ನ ಎಲ್ಲರದ್ದು. ಹುಡುಗರದ್ದು ಒಂದು ಜಾನರಿನದಾದರೆ, ಹುಡುಗಿಯರದು ಮತ್ತೊಂದು ಬಗೆ. ನೋವು ಮರೆಯೋದಕ್ಕೆ ಹುಡುಗರು ಹಿಡಿಯುವ ದಾರಿಯನ್ನೇ ಹುಡುಗಿಯರು ಆರಿಸಿಕೊಳ್ಳಬೇಕೆಂಬುದೇನಿಲ್ಲ ಅಲ್ಲವೇ. ಹುಡುಗಿಯರಿಗೆ ಅಂತಹ ಸನ್ನಿವೇಶಗಳು ಎದುರಾದ್ರೆ ಏನ್ಮಾಡಬಹುದು ಅನ್ನೋದಕ್ಕೆ ಯಾನ ನೋಡ್ಲೇಬೇಕು.
ಯಾನ ಹೆಸರೇ ಸೂಚಿಸುವಂತೆ ಪ್ರಯಾಣದ ಕಥೆ. ಮೂವರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಹೆಣ್ಣುಮಕ್ಕಳು ತಮ್ಮ ದಾರಿಗೆ ಅಡ್ಡ ಬರುವ ಸವಾಲುಗಳನ್ನು ಸ್ವೀಕರಿಸಿ ತಮ್ಮ ಜೀವನವನ್ನು ಹೇಗೆ ಸುಗಮಗೊಳಿಸಿಕೊಳ್ಳುತ್ತಾರೆ ಅನ್ನೋದೆ ಕಥೆಯ ಒನ್ ಲೈನ್.


ಪ್ರಸ್ತುತ ಯುವ ಜನಾಂಗದ ತೊಳಲಾಟಗಳನ್ನು, ಪಾಲಕರ ಪರದಾಟಗಳನ್ನು ವಿಜಯಲಕ್ಷ್ಮಿ ಸಿಂಗ್ ಹಳೇ ಶೈಲಿಯಲ್ಲಿಯೇ ಹೇಳಲು ಪ್ರಯತ್ನಿಸಿರೋದು ಚಿತ್ರಕ್ಕೆ ಮೈನಸ್. ಆದರೆ ಬ್ಲಾಕ್ ಅಂಡ್ ವೈಟ್ ಕಥೆಗೆ ಗ್ಲಾಮರೆಂಬ ಬಣ್ಣ ಬಳಸಿ ಕಥೆಯ ಅಂದ ಹೆಚ್ಚಿಸಲು ಪ್ರಯತ್ನಿಸಿದ್ದಾರೆ.


ಇನ್ನು ವೈಭವಿ, ವೈನಿಧಿ, ವೈಸಿರಿ ಅಭಿನಯ ನೋಡುಗರ ಕಣ್ಣುತುಂಬುತ್ತದೆ. ನಟನೆಗೆ ಹೊಸಬರಾದರೂ ತಂದೆ ತಾಯಿಯ ನಟನೆಯ ಬ್ಲಡ್ಡು ಮಕ್ಕಳಲ್ಲಿ ಹರಿದಾಡುತ್ತಿದೆ ಎಂಬುದನ್ನು ಮೂವರು ನಿರೂಪಿಸಿದ್ದಾರೆ. ಅಲ್ಲಲ್ಲಿ ಸಿನಿಮಾ ಬೋರು ಹೊಡೆದರೂ ಈ ಮೂವರಿಂದ ಬೋರು ಬೀರು ಸೇರುವುದಂತೂ ನಿಜವೇ. ಉಳಿದಂತೆ ಅನಂತ್ ನಾಗ್, ಸುಹಾಸಿನಿ, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಸಂಜು ಬಸಯ್ಯ ಮೊದಲಾದ ಪಾತ್ರಗಳು ನೆನಪುಳಿಯುತ್ತವೆ. ಆದರೆ ಕಾಮಿಡಿ ಆರ್ಟಿಸ್ಟುಗಳನ್ನು ಆರ್ಟಿಫಿಷಿಯಲ್ ನಗು ಉಕ್ಕಿಸಲೆಂದೇ ತುರುಕಿದಂತಿದೆ. ಇನ್ನು ಕಥೆಗೆ ತಕ್ಕಂತ ಲೊಕೇಷನ್ನು, ಕ್ಯಾಮೆರಾ ಕೆಲಸ, ಎಡಿಟಿಂಗು, ಹಿನ್ನೆಲೆ ಸಂಗೀತವಿದೆ. ಬುದ್ದಿವಂತ ನಿರ್ಮಾಪಕ ಜೈ ಜಗದೀಶ್ ಒಂದೇ ಬಂಡವಾಳದಲ್ಲಿ ತನ್ನ ಮೂವರು ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿರೋದಂತೂ ಯಾನದ ನಿಜ ವಿಷಯ!

CG ARUN

ಹಳೆ ಹೋಳಿಗೆಗೆ ಹೊಸ ಹೂರಣ – ಆಪರೇಷನ್ ನಕ್ಷತ್ರ!

Previous article

ನಾಳೆ ಪೈಲ್ವಾನ್ ರೊಮ್ಯಾಂಟಿಕ್ ಸಾಂಗ್ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *