ನಾಯಕನ ಪಾಲಿಗೆ ಸಾವೆಂಬುದು ಆಗಾಗ ನೆತ್ತಿ ಸವರಿ ಅಪ್ಪಿಕೊಳ್ಳಲು ಆತುರಗೊಂಡು ನಿಂತಿರುತ್ತದೆ. ಹೀಗೆ ಸಾವಿನ ಸಮ್ಮುಖದಲ್ಲಿ ನಿಂತಾಗ ಕೆಲಮಂದಿ ಮಾನಸಿಕವಾಗಿ ಕುಗ್ಗಿ ತಾವೇ ತಾವಾಗಿ ಅದರ ತೆಕ್ಕೆಗೆ ಬೀಳಿತ್ತಾರೆ. ಮತ್ತೆ ಕೆಲ ಮನಸುಗಳು ಇರೋವಷ್ಟು ದಿನ ತಾವು ಬಯಸಿದಂತೆಯೇ ಉತ್ಕಟವಾಗಿ ಬದುಕಿ ಹೋಗಲು ಬಯಸುತ್ತಾರೆ. ಯಾರಿಗೆ ಯಾರುಂಟು ಚಿತ್ರದ ನಾಯಕನದ್ದು ಎರಡನೇ ಸಾಲಿನ ಜಾಯಮಾನ. ಆಯುಷ್ಯ ಅಕಾಲದಲ್ಲಿ ಮುಗಿಯುತ್ತಾ ಬಂದಿದ್ದರೂ ಆತನಿಗೆ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಮಿಂದೆದ್ದು ಕಣ್ಮುಚ್ಚುವ ಬಯಕೆ. ಭಾವನೆಗಳ ತೊಳಲಾಟದ ಈ ಕಥೆಯನ್ನು ಎಲ್ಲರೂ ಮೆಚ್ಚಿಕೊಳ್ಳುವ ಮನೋರಂಜನಾತ್ಮಕ ಚೌಕಟ್ಟಿಗೆ ಒಗ್ಗಿಸಿ ದೃಷ್ಯವಾಗಿಸುವಲ್ಲಿ ನಿರ್ದೇಶಕ ಕಿರಣ್ ಗೋವಿ ಯಶ ಕಂಡಿದ್ದಾರೆ.

ಹೆಚ್.ಸಿ ರಘುನಾಥ್ ನಿರ್ಮಾಣದ ಈ ಸಿನಿಮಾ ತ್ರಿಕೋನ ಪ್ರೇಮಕಥೆ ಹೊಂದಿದೆ.ಒಂದು ಮನಮಿಡಿಯುವ ಕಥಾ ಎಳೆಗೆ, ಎಲ್ಲಿಯೂ ಭಾವತೀವ್ರತೆ ಮುಸುಕಾಗದಂತೆ ಪಾತ್ರಗಳನ್ನ ಪೋಣಿಸಿ ದೃಷ್ಯ ಕಟ್ಟಲಾಗಿದೆ. ಆರಂಭ ಕಾಲದಿಂದಲೂ ಮಾಧುರ್ಯ ತುಂಬಿದ ಹಾಡುಗಳ ಮೂಲಕವೇ ಯಾರಿಗೆ ಯಾರುಂಟು ಗಮನ ಸೆಳೆದಿತ್ತಲ್ಲಾ? ಅದಕ್ಕೆ ಪೂರಕವಾದ ದೃಷ್ಯಗಳೇ ತೆರೆಯ ಮೇಲೆಯೂ ಬಿಚ್ಚಿಕೊಂಡು ಪ್ರೇಕ್ಷಕರು ಪುಳಕಗೊಳ್ಳುವಂತೆ ಮಾಡಿದೆ.

ಚಿತ್ರದ ನಾಯಕ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವಾತ. ಅಕಾಲಿಕವಾಗಿ ಎದುರು ನಿಂತ ಸಾವೇ ಕಂಗಾಲಾಗುವಂಥಾ ಜೀವನ ಪ್ರೇಮ ಹೊಂದಿರೋ ಈತ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇನ್ನೇನು ಕಡೇ ದಿನಗಳು ಹತ್ತಿರಾಗಿದೆ ಅಂತ ಗೊತ್ತಾದೇಟಿಗೆ ಹುಡುಗಿಯೊಬ್ಬಳನ್ನು ಪ್ರೀತಿಸಿ ಆ ಖುಷಿಯಲ್ಲಿಯೇ ನೆಮ್ಮದಿಯಾಗಿ ಎದ್ದು ನಡೆಯೋ ಆಸೆ ಆತನನ್ನು ಕಾಡುತ್ತೆ. ಈ ಹಾದಿಯಲ್ಲಿ ಎಂದಲ್ಲ, ಮೂರು ಹುಡುಗಿಯರು ನಾಯಕನಿಗೆ ಒಬ್ಬರಾದ ಮೇಲೊಬ್ಬರಂತೆ ಸಿಗುತ್ತಾರೆ. ಆದರೆ ಆ ಮೂರೂ ಹುಡುಗೀರು ಯಾವುದೋ ಅನಿವಾರ್ಯತೆಗೆ ಬಂಧಿಗಳಾಗಿರುತ್ತಾರೆ.

ಹಾಗಾದರೆ ನಾಯಕನನ್ನು ಸಾವಿನ ಸಮ್ಮುಖದಲ್ಲಿ ನಿಲ್ಲಿಸಿದ ಕಾಯಿಲೆ ಯಾವುದು? ಮೂವರು ನಾಯಕಿಯರಲ್ಲಿ ಯಾರು ಕಡೆಗೂ ಈತನಿಗೆ ಸಿಗುತ್ತಾರೆ? ಅಷ್ಟಕ್ಕೂ ನಾಯಕ ಪ್ರಾಣಾಪಾಯದಿಂದ ಪಾರಾಗುತ್ತಾನಾ? ಇಷ್ಟು ಕುತೂಹಲವಿಟ್ಟುಕೊಂಣಡು ನೋಡಿದರೆ ಯಾರಿಗೆ ಯಾರುಂಟು ಚಿತ್ರ ಬೇರೆಯದ್ದೇ ಆದ ಮೋಹಕ ಅನುಭವವೊಂದನ್ನು ಪ್ರತಿಯೊಬ್ಬರ ಮನಸುಗಳಿಗೂ ತುಂಬಿಸುತ್ತೆ.

ಒರಟ ಪ್ರಶಾಂತ್ ನಾಯಕನಾಗಿ ಬೇರೆಯದ್ದೇ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ಅವರದ್ದಿಲ್ಲಿ ಭಾವನಾತ್ಮಕ ಸನ್ನಿವೇಶಗಳೇ ತುಂಬಿಕೊಂಡಿರೋ ಪಾತ್ರ. ಇದನ್ನವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇನ್ನು ಸೀರಿಯಲ್‌ಗಳಲ್ಲಿ ಖ್ಯಾತರಾಗಿದ್ದ ಕೃತಿಕಾ ರವೀಂದ್ರ ಪಾಲಿಗಿದು ಮೊದಲ ಕಮರ್ಶಿಯಲ್ ಚಿತ್ರ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನಾಯಕಿಯಾಗಿ ಮತ್ತಷ್ಟು ಅವಕಾಶಗಳನ್ನು ಬಾಚಿಕೊಳ್ಳುವ ಸೂಚನೆ ನೀಡಿದ್ದಾರೆ. ಇನ್ನುಳಿದಂತೆ ಇನ್ನಿಬ್ಬರು ನಾಯಕಿಯರಾದ ಲೇಖಾ ಚಂದ್ರ ಮತ್ತು ಅದಿತಿ ರಾವ್ ಕೂಡಾ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರಾಕೇಶ್ ಅವರ ಕ್ಯಾಮೆರಾ ಕೈಚಳಕ ಇಡೀ ಚಿತ್ರದ ಒಟ್ಟಂದವನ್ನ ಹೆಚ್ಚಿಸಿದೆ. ಹಾಡುಗಳು ಈ ಸಿನಿಮಾದ ಶಕ್ತಿಯೆಂಬಂತೆ ಮೂಡಿ ಬಂದಿದೆ. ಈ ಮೂಲಕ ಕಿರಣ್ ಗೋವಿಯವರ ಮ್ಯೂಸಿಕಲ್ ಹಿಟ್ ಜರ್ನಿ ಅನೂಚಾನವಾಗಿ ಮುಂದುವರೆದಿದೆ.

cinibuzz ರೇಟಿಂಗ್ : *****/***1/2

CG ARUN

ಕದ್ದುಮುಚ್ಚಿ: ಪ್ರೀತಿಯ ಹಸಿರಲ್ಲಿ ಮೈಮರೆಸುವ ಚಿತ್ರ!

Previous article

ಬರಮಣ್ಣನ ಬೆನ್ನಿಗೆ ಗಾಯ! ಶೂಟಿಂಗ್ ಟೈಮಲ್ಲಿ ಎದುರಾಯ್ತು ಭಾರೀ ಅಪಾಯ!

Next article

You may also like

Comments

Leave a reply

Your email address will not be published. Required fields are marked *