ನಟ, ನಿರ್ದೇಶಕ, ನಿರ್ಮಾಪಕ ಬಿ.ಸುರೇಶ ಹೊಸದೊಂದು ಸಿನಿಮಾಗೆ ಕತೆ ಬರೆದಿದ್ದಾರಂತೆ. ಕತೆಯನ್ನು ಬರೆದು ಮತ್ತೊಬ್ಬ ಪ್ರತಿಭಾವಂತ ನಟ, ರಂಗಭೂಮಿ ಪ್ರತಿಭೆ ಗೋಪಾಲ ದೇಶಪಾಂಡೆ ಅವರಿಂದ ಈ ಸಿನಿಮಾವನ್ನು ನಿರ್ದೇಶನ ಮಾಡಿಸುತ್ತಿದ್ದಾರೆ. ಈ ಸಿನಿಮಾಗೆ ಸುರೇಶಣ್ಣ ಇಟ್ಟಿರೋ ಹೆಸರು ಅಡುಗೆಮನೆ ಹುಲಿ! ಅದಕ್ಕೆ ಒಂದು ಸುಳ್ಳಿನ ಸರಮಾಲೆ ಅಂತಾ ಟ್ಯಾಗ್ ಲೈನ್ ಕೂಡಾ ಇಟ್ಟಿದ್ದಾರಂತೆ!
ಈ ಸಿನಿಮಾ ನ್ಯೂಸ್ ಚಾನೆಲ್ ಮತ್ತದರ ಸುಳ್ಳು ಸುದ್ದಿಯಿಂದಾದ ಅವಾಂತರಗಳ ಕುರಿತಾಗಿದೆಯಂತೆ. ಯಜಮಾನ ಅನ್ನೋ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ನಿರ್ಮಿಸಿರುವ ಸುರೇಶ್ ತಮ್ಮ ಮೀಡಿಯಾ ಹೌಸ್ ಸಂಸ್ಥೆಯ ಮೂಲಕ ಅಡುಗೆಮನೆ ಹುಲಿಯನ್ನು ನಿರ್ಮಿಸುತ್ತಿದ್ದಾರೆ.
No Comment! Be the first one.