ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಹಾಡುಗಳು ಅಭಿಮಾನದ ಪರಿಧಿಯಾಚೆಗೂ ದಾಂಗುಡಿ ಇಟ್ಟಿವೆ. ಇದುವೇ ಯಜಮಾನನ ಬಗ್ಗೆ ಮತ್ತಷ್ಟು ಕ್ರೇಜ್ ಸೃಷ್ಟಿಯಾಗಲೂ ಕಾರಣವಾಗಿದೆ. ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರೋ ಸೂಪರ್ ಸಾಂಗ್ ಗಳಿಂದ ಥ್ರಿಲ್ಲ ಆಗಿರೋ ಅಭಿಮಾನಿಗಳಿಗೆ ದರ್ಶನ್ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ!
ಖುದ್ದು ದರ್ಶನ್ ಅವರೇ ಹೇಳಿಕೊಂಡಿರೋ ಪ್ರಕಾರ ಹೇಳೋದಾದರೆ, ಇದೇ ಫೆಬ್ರವರಿ ಹತ್ತರಂದು ಯಜಮಾನ ಚಿತ್ರದ ಟ್ರೈಲರ್ ಲಾಂಚ್ ಆಗಲಿದೆ. ಅಂದು ಬೆಳಗ್ಗೆ ಹತ್ತು ಘಂಟೆಗೆ ಸರಿಯಾಗಿ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಅನಾವರಣಗೊಳ್ಳಲಿದೆ. ಈ ವಿಚಾರವನ್ನ ಟ್ವಿಟರ್ ಮೂಲಕ ದರ್ಶನ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಯಜಮಾನ ಚಿತ್ರದ ಹಾಡುಗಳಿಗೆ ಕೇಳಿ ಬರುತ್ತಿರುವ ವ್ಯಾಪಕ ಮೆಚ್ಚುಗೆ, ಬೆಂಬಲಗಳ ಬಗ್ಗೆಯೂ ದರ್ಶನ್ ಉಲ್ಲೇಖಿಸಿದ್ದಾರೆ. ಈ ಹಾಡುಗಳನ್ನ ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ ಹೇಳಿದ್ದಾರೆ. ಈಗ ಹೊರ ಬಂದಿರೋ ನಾಲಕ್ಕೂ ಹಾಡುಗಳೂ ಕೂಡಾ ಯೂ ಟ್ಯೂಬ್ ಟ್ರೆಂಡಿಂಗ್ ನಲ್ಲಿವೆ. ಇದೇ ಬಿಸಿಯಲ್ಲಿ ಟ್ರೈಲರ್ ಲಾಂಚ್ ಆಗಲು ಕ್ಷಣಗಣನೆ ಶುರುವಾಗಿದೆ.
#