ಚಾಲೆಂಜಿಂಗ್ ಸ್ಟಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಯಜಮಾನ. ಈಗಾಗಲೇ ಜಗತ್ತಿನಾದ್ಯಂತ ತೆರೆಕಂಡು ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ಚಿತ್ರದ ಪ್ರತಿಯೊಂದು ಸಾಂಗು ರಿಲೀಸ್ ಗೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡಿದ್ದವು. ಅದರಲ್ಲೂ ನಿಂತು ನೋಡು ಯಜಮಾನ ಟೈಟಲ್ ಸಾಂಗ್ ಒಂದು ಕೈ ಹೆಚ್ಚಾಗಿಯೇ ಅಭಿಮಾನಿಗಳ ಮನಮುಟ್ಟಿತ್ತು. ಅದರ ವಿಡಿಯೋ ಸಾಂಗ್ ಇಂದು ರಿಲೀಸ್ ಆಗಿದೆ.
ಯಜಮಾನ ರೈತ ಪರ ಕಾಳಜಿಯುಳ್ಳ ಚಿತ್ರವಾಗಿದ್ದು, ಸ್ವದೇಶಿ ಮಾರುಕಟ್ಟೆಯನ್ನು ಬೆಂಬಲಿಸುವ ಕಥಾಹಂದರವನ್ನು ಹೊಂದಿರುವಂತದ್ದು. ಸಾಲಮನ್ನಾ ಮಾಡುವುದಕ್ಕಿಂತ ಬೆಳೆದ ಬೆಳೆಗೆ ಬೆಂಬಲ ಬೆಳೆ ಸಿಗಬೇಕೆಂಬುದು ಯಜಮಾನನ ಕಳಕಳಿಯೂ ಆಗಿತ್ತು. ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಲಿರಿಕ್ಸ್ ಬರೆದಿದ್ದು ವಿಜಯ್ ಪ್ರಕಾಶ್ ಕಂಠದಲ್ಲಿ ಅತ್ಯದ್ಭುತವಾಗಿ ಮೂಡಿಬಂದಿದೆ.
No Comment! Be the first one.