ಹಿರಿಯ ನಟ ಜೈ ಜಗದೀಶ್ ಹಾಗೂ ವಿಜಯ್ ಲಕ್ಷ್ಮೀ ದಂಪತಿಗಳ ತ್ರಿಪುತ್ರಿಯರ ಯಾನ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಯ್ತು. ಹೌದು ಯಾನ ಸಿನಿಮಾವನ್ನು ಜುಲೈ 12 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರದಲ್ಲಿ ವೈಭವಿ, ವೈನಿಧಿ, ವೈಸಿರಿ ಮೂವರು ನಟಿಸಿದ್ದು, ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.

ಮೂವರಿಗೆ ಚಕ್ರವರ್ತಿ, ಸುಮುಖ್, ಅಭಿಷೇಕ್ ಎಂಬ ಯುವಕರು ಜತೆಯಾಗಿದ್ದಾರೆ. ವಿಜಯಲಕ್ಷ್ಮೀ ಅವರೇ ಸ್ವತಃ ಕಥೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಹರೀಶ್ ಶೇರಿಗಾರ್ ದಂಪತಿ ಬಂಡವಾಳವನ್ನು ಹೂಡಿದ್ದಾರೆ. ಜೋಶಿವ್ ಶ್ರೀಧರ್ ಸಂಗೀತ, ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

CG ARUN

ಹೊರಬಿತ್ತು ಸಿಂಗ ಟ್ರೇಲರ್!

Previous article

ಜೂನ್ 21ಕ್ಕೆ ತೆರೆಗೆ ಬರಲಿದೆ ಹಫ್ತಾ!

Next article

You may also like

Comments

Leave a reply

Your email address will not be published. Required fields are marked *