ಕುಟುಂಬದವರು ಸಿನಿಮಾದಲ್ಲಿದ್ದರೆ ಮಾತ್ರ ಮಕ್ಕಳು ಸಿನಿಮಾಕ್ಕೆ ಬರಬೇಕು. ಆಗಷ್ಟೇ ನೇಮು ಫೇಮು ಎನ್ನುವ ಓಬಿರಾಯನ ಕಾಲದ ಡೈಲಾಗುಗಳು ಈಗೀಗ ಮೂಲೆಗೆ ಸೇರಿದ ಒಳಕಲ್ಲಿನಂತಾಗಿದೆ. ಯಾಕಂದ್ರೆ ಪ್ರತಿಭೆಯ ಹೊರತಾಗಿ ಈಗ ಅವಾವುದೇ ಲೆಕ್ಕಕ್ಕೆ ಬರುತ್ತಿಲ್ಲ. ಸ್ಯಾಂಡಲ್ ವುಡ್ ಗೆ ಅಂತಹ ಹೊಸ ಹೊಸ ಪ್ರತಿಭೆಗಳ ಎಂಟ್ರಿ ಜೋರಾಗಿಯೇ ನಡೆಯುತ್ತಿದೆ. ಡೈರೆಕ್ಟರ್ ನಿಂದ ಹಿಡಿದು, ಮ್ಯೂಜಿಕ್ ಡೈರೆಕ್ಟರ್ರು, ಹೀರೋ, ಹೀರೋಯಿನ್ನು, ವಿಲನ್ನು ಇತ್ಯಾದಿ ಇತ್ಯಾದಿ ಹೊಸಬರೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಉಳಿಸಿಕೊಳ್ಳುತ್ತಿದ್ದಾರೆ.
ಸದ್ಯ ಯಾರ್ ಮಗಾ ಎನ್ನುವ ಟೈಟಲ್ ಇಟ್ಟುಕೊಂಡು ಮತ್ತದೇ ಹೊಸ ಮುಖಗಳ ಎಂಟ್ರಿ ಆಗುತ್ತಿದೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಪಡುಕೋಟೆ ಪ್ರೊಡಕ್ಷನ್ ಸಂಸ್ಥೆಯು ನಿರ್ಮಾಣ ಮಾಡುತ್ತಿದ್ದು, ಚೊಚ್ಚಲ ಬಾರಿಗೆ ಸುರೇಶ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ರಘು ಪಡುಕೋಟೆ, ವಿದ್ಯಾ ಪ್ರಭು, ಶಾಲಿನಿ ಗೌಡ, ಸರಿಗಮಪ ಖ್ಯಾತಿಯ ಸುನೀಲ್ ನಟಿಸಿದ್ದಾರೆ.
No Comment! Be the first one.