ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್, ಲಿರಿಕಲ್ ವೀಡಿಯೋ ಸಾಂಗ್ ಮೂಲಕ ಈ ಚಿತ್ರದ ಕಥಾನಕದ ಬಗ್ಗೆ ಪ್ರೇಕ್ಷಕರಿಗೊಂದು ಅಂದಾಜು ಸಿಕ್ಕಿತ್ತು. ಆದರೆ ಈ ಟ್ರೈಲರ್ ಮೂಲಕ ಅದೆಲ್ಲವೂ ಉಲ್ಟಾ ಹೊಡೆದಿದೆ.
ಒರಟ ಪ್ರಶಾಂತ್ ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ ಮತ್ತು ಅವರು ಮೂವರು ಹುಡುಗೀರೊಂದಿಗೆ ಲವ್ವಲ್ಲಿ ಬೀಳುತ್ತಾರೆ ಎಂದೇ ಪ್ರೇಕ್ಷಕರೆಲ್ಲ ಅಂದುಕೊಂಡಿದ್ದರು. ಆದರೆ ಈ ಟ್ರೈಲರಿನಲ್ಲಿ ಬೇರೆಯದ್ದೇ ಸೂಚನೆ ಸಿಕ್ಕಿದೆ. ಜೊತೆಗೆ ನಾಯಕ ಯಾಕೆ ಮೂವರು ಹುಡುಗೀರ ಜೊತೆ ಡ್ಯುಯೆಟ್ ಹಾಡ್ತಾನೆ, ಯಾಕೆ ಸುತರ್ತಲಿನವರೆಲ್ಲ ಆತನಿಗೇ ಸಪೋರ್ಟು ಮಾಡುತ್ತಾರೆ ಅನ್ನೋ ಕ್ಯೂರಿಯಾಸಿಟಿಯ ಜೊತೆಗೇ, ಆನಿಮೇಟೆಡ್ ರಂಗಣ್ಣ ಮತ್ತೊಂದುಯ ಬಾಂಬನ್ನೂ ಹಾಕಿದ್ದಾನೆ!
ಆ ಪ್ರಕಾರ ಹೇಳೋದಾದ್ರೆ, ಈ ಸಿನಿಮಾದಲ್ಲಿ ಡಾಕ್ಟರ್ ಪೋಷಾಕು ತೊಟ್ಟಿರೋ ನಾಯಕ ಅಸಲಿಗೆ ಡಾಕ್ಟರೇ ಅಲ್ಲವಂತೆ. ಟೀಸರ್ ಅನ್ನು ನಿರೂಪಣೆ ಮಾಡಿ ಮನ ಗೆದ್ದಿದ್ದ ಕಾರ್ಟೂನ್ ರಂಗಣ್ಣ ಎಂಬ ಕ್ಯಾರೆಕ್ಟರಿನ ಮೂಲಕವೇ ನಿರ್ದೇಶಕರು ಈ ಟ್ರೈಲರ್ ಅಂತರಾಳವನ್ನೂ ಬಿಚ್ಚಿಟ್ಟಿದ್ದಾರೆ. ಅಂತೂ ಈ ಮೂಲಕವೇ ಯಾರಿಗೆ ಯಾರುಂಟು ಚಿತ್ರದ ಬಗ್ಗೆ ಅಗಾಧ ನಿರೀಕ್ಷೆಗಳು ಹುಟ್ಟಿಕೊಂಡಿವೆ.
https://www.youtube.com/watch?v=61ZeE980hIU&feature=youtu.be #