ಸ್ಯಾಂಡಲ್ ವುಡ್ ಕಮ್ ಟಾಲಿವುಡ್ ಅಂಗಳದಲ್ಲಿ ಕಳೆದೊಂದು ವಾರದಿಂದ ಚರ್ಚೆಯಲ್ಲಿರುವ ಪುರಿ ಜಗನ್ನಾಥ್ ಹಾಗೂ ರಾಕಿಂಗ್ ಸ್ಟಾರ್ ಕಾಂಬಿನೇಷನ್ನಿನ ಸಿನಿಮಾ ಜನಗಣಮನ ಸೆಟ್ಟೇರೋದು ಕನ್ ಫರ್ಮ್ ಆಗಿದೆ. ಈ ಮೊದಲು ಪುರಿ ಜಗನ್ನಾಥ್ ಮಹೇಶ್ ಬಾಬು ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದು, ಆನಂತರ ಕಾರಣಾಂತರಗಳಿಂದ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಿಂದ ಹೊರಬಂದ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ್ ಜನಗಣಮನ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸೆಲೆಕ್ಟ್ ಕೂಡ ಮಾಡಿದ್ದಾರೆ. ಜತೆಗೆ ಒಂದೆರಡು ಸುತ್ತು ಯಶ್ ಭೇಟಿಯಾಗಿ ಕಥೆಯನ್ನು ಹೇಳಿರುವ ಪುರಿ ಜಗನ್ನಾಥ್ ಗೆ ರಾಕಿ ಭಾಯ್ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ.
ಮೂಲಗಳ ಪ್ರಕಾರ ಕೆಜಿಎಫ್ ಚಾಪ್ಟರ್ -2 ಕಂಪ್ಲೀಟ್ ಆದ ನಂತರ ‘ಜನ ಗಣ ಮನ’ ಶುರುವಾಗಲಿದೆ. ಬಹುತೇಕ ಜನವರಿ ಆರಂಭದಲ್ಲಿ ಅಥವಾ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಟೇಕಾಫ್ ಆಗುವ ಸಾಧ್ಯತೆ ಇದೆ. ‘ಜನ ಗಣ ಮನ’ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಮಲ್ಟಿ ಲಾಂಗ್ವೇಜ್ನಲ್ಲಿ ನಿರ್ಮಾಣ ಆಗಲಿದೆ.
No Comment! Be the first one.