ದಿಗ್ಗಜರು ಚಿತ್ರದಲ್ಲಿ ನಾಯಕಿ ಮಗುವಾಗಿದ್ದಾಗ ಕಿವಿ ಚುಚ್ಚುವ ಸಂದರ್ಭದಲ್ಲಿ ವಿಷ್ಣುವರ್ಧನ್ ಗೋಳಾಡುವ ಮನಕಲಕುವ ದೃಶ್ಯವನ್ನು ಸಿನಿಮಾ ನೋಡಿದ ಮಂದಿ ಯಾರೂ ಮರೆತಿರಲಿಕಿಲ್ಲ. ಸದ್ಯ ಅಂತವುದೋ ಸೀನೊಂದು ಸೆಲೆಬ್ರೆಟಿಗಳ ಜೀವನದಲ್ಲಿಯೂ ನಡೆದಿದೆ. ಯೆಸ್.. ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಈ ವೇಳೆ ಯಶ್ ಕಣ್ಣೀರು ಹಾಕಿದ್ದಾರೆ ಎಂಬುದನ್ನು ಸ್ವತಃ ರಾಧಿಕಾ ಪಂಡಿತ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಮಗಳ ಜತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಶೇರ್ ಮಾಡಿದ್ದಾರೆ.
https://www.instagram.com/p/B1p6PAqgRmE/?utm_source=ig_web_copy_link
ಅಲ್ಲದೇ ” ಮಗಳಿಗೆ ಕಿವಿ ಚುಚ್ಚಿಸಿರುವ ಬಗ್ಗೆ ಹೇಳಿಕೊಂಡಿದ್ದು, ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
No Comment! Be the first one.