- ಮಹಂತೇಶ್ ಮಂಡಗದ್ದೆ
ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕ್ರೇಜ಼್ ಹುಟ್ಟಿಸಿರುವ ಸ್ಟಾರ್ ಯಶ್. ಕೆಜಿಎಫ್ ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಾವ ಲೆವೆಲ್ ಗೆ ಬೆಳದಿದ್ದಾರೆ ಅನ್ನೋದಕ್ಕೆ ಕೆ.ಜಿಎಫ್ 2 ಟ್ರೈಲರ್ ರೆಕಾರ್ಡ್ ಗಳೇ ಸಾಕು… ಚಾಪ್ಟರ್ 1 ಟಿಟೌನ್, ಬಿಟೌನ್ ಗೆ ಟಕ್ಕರ್ ಕೊಟ್ರೆ… ಕೆಜಿಎಫ್ 2 ಸೀದಾ ಹಾಲಿವುಡ್ ಜೊತೆ ಪೈಪೋಟಿಗೆ ನಿಂತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.
ಈ ಲೆವೆಲ್ ಗೆ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿರೋ ರಾಕಿ ಬಾಯ್ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಅನ್ನೋದು ಯಶ್ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. ರಾಕಿಬಾಯ್-ಅಧೀರನ ಕಾಳಗಕ್ಕೆ ಈಗಾಗಲೇ ಡೇಟ್ ಫಿಕ್ಸ್ ಆಗಿದ್ದು, ಸಿನಿಮಾದ ಶೂಟಿಂಗ್ ಎಲ್ಲಾ ಮುಗಿದು ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿಯಿದೆ ಚಿತ್ರತಂಡ. ಇದೇ ಹೊತ್ತಲ್ಲೇ ಯಶ್ ನೆಕ್ಸ್ಟ್ ಸಿನಿಮಾದ ಸುದ್ದಿ ಗಾಂಧಿನಗರದ ಸರ್ಕಲ್ ನಲ್ಲಿ ರೌಂಡ್ ಹೊಡಿತಿದೆ.
ಹೌದು, ಸದ್ಯದ ಮಾಹಿತಿಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಮಫ್ತಿ ಸಿನಿಮಾದ ಡೈರೆಕ್ಟರ್ ನರ್ತನ್ ಜೊತೆ ನೆಕ್ಸ್ಟ್ ಪ್ರಾಜೆಕ್ಟ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅತ್ತ ಪ್ರಭಾಸ್ ಜೊತೆ ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಬ್ಯುಜಿಯಾಗಿದ್ದೇ ತಡ ಇತ್ತ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಯಶ್ ಫೋಕಸ್ ಮಾಡ್ತಿದ್ದಾರೆ. ಈಗಾಗಲೇ ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಬಿಗ್ ಸಕ್ಸಸ್ ಕಂಡಿರೋ ನರ್ತನ್ ಈಗ ಯಶ್ ಜೊತೆ ಕೈಜೋಡಿಸ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾದ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದ್ದು, ಸಿನಿಮಾದ ಸ್ಕ್ರಿಪ್ಟಿಂಗ್ ಬಗ್ಗೆ ಕೆಲಸಗಳು ಶುರುವಾಗಿದೆ ಅಂತಿವೆ ಸ್ಯಾಂಡಲ್ವುಡ್ ಮೂಲಗಳು.
ಕೆ.ಜಿಎಫ್ ಮೂಲಕ ಪ್ಯಾನ್ ಇಂಡಿಯಾದಾದ್ಯಂತ ದೊಡ್ಡ ಮಟ್ಟಿಗೆ ಕ್ರೇಜ್ ಹೆಚ್ಚಿಸಿಕೊಂಡಿರೋ ಯಶ್ ರ ಮುಂದಿನ ಸಿನಿಮಾಗೂ ಅಷ್ಟೇ ಹೈ ವೋಲ್ಟೇಜ್ ಇರಲಿದೆ. ಮಲ್ಟಿ ಸ್ಟಾರ್ಸ್ ಜೊತೆ ಈಗಾಗಲೇ ಸಕ್ಸಸ್ ಕಂಡಿರೋ ನರ್ತನ್ ಕೂಡ ಮತ್ತೊಂದು ಲೆವೆಲ್ ನ ಸಿನಿಮಾಗೆ ಕೈ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಜಟಸ್ಯ ಅನ್ನೋ ಟೈಟಲ್ ನಲ್ಲಿ ಅಇನಿಮಾ ತಯಾರಾಗ್ತಿದೆ ಎನ್ನಲಾಗ್ತಿದೆ. ಈ ಬಗ್ಗೆ ಯಶ್ ಅಥವಾ ನರ್ತನ್ ಅವರೇ ಅಧಿಕೃತ ಮಾಹಿತಿ ಹಂಚಿಕೊಳ್ಳೋದೊಂದೆ ಬಾಕಿ. ಎಲ್ಲಾ ಅಂದುಕೊಂಡಂತೆ ಆದ್ರೆ ಇನ್ನು ಎರಡು ತಿಂಗಳಲ್ಲಿ ನರ್ತನ್-ಯಶ್ ಕಾಂಬಿನೇಷನ್ ನ ಹೊಸ ಸಿನಿಮಾ ಸೆಟ್ಟೇರೋ ಸಾಧ್ಯತೆಯಿದೆ.
No Comment! Be the first one.