ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಬರ್ತಡೇ ವೈಭವ ಮತ್ತು ಅದಕ್ಕೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ ಯಶ್ ಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಂಗುರಂಗಿನ ಸುದ್ದಿಗಳೇ ಹರಿದಾಡುತ್ತಿವೆ. ವಿದ್ವತ್ ಎಂಬಾತನ ಮೇಲೆ ಸತ್ತೇ ಹೋಗುವಂತೆ ಹಲ್ಲೆ ನಡೆಸಿ ತಿಂಗಳುಗಳ ಕಾಲ ಕಂಬಿ ಎಣಿಸಿ ಬಂದಾತ ನಲಪಾಡ್. ಈತ ಹೊರ ಬಂದಿರೋದು ಜಾಮೀನಿನ ಮೇಲೆ. ವಿದ್ವತ್ ಮೇಲಿನ ಪ್ರಕರಣವಿನ್ನೂ ವಿಚಾರಣೆಯ ಹಂತದಲ್ಲಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ನಲಪಾಡ್ ಈ ಪ್ರಕರಣದ ಆರೋಪಿ. ಇಂಥಾ ಆಸಾಮಿಗೆ ಬರ್ತಡೇ ವಿಶ್ ಮಾಡಿ, ದುಬಾರಿ ಗಿಫ್ಟು ಕೊಟ್ಟು ಹಾರ ತುರಾಯಿ ಹಾಕಿಸಿಕೊಂಡು ಸಂಭ್ರಮಿಸಿದ ಯಶ್ ಇದೀಗ್ ಹಲವಾರು ಪ್ರಶ್ನೆಗಳನ್ನ ಎದುರಿಸುವಂತಾಗಿದೆ!
ನಲಪಾಡ್ ಮನೆಗೇ ತೆರಳಿ ಬರ್ತಡೇ ವಿಶ್ ಮಾಡಿದ್ದಲ್ಲದೇ ದುಬಾರಿ ಬೆಲೆಯ ಮ್ಯಾಕ್ ಬುಕ್ ಅನ್ನೂ ಕೂಡಾ ಯಶ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರ ಫೋಟೋಗಳೀಗ ಎಲ್ಲೆಡೆ ಇಟ್ಟಾಡುತ್ತಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಖಗ ಹೊಂದಿರೋ, ಯುವ ಸಮುದಾಯಕ್ಕೆ ಮಾದರಿಯಾಗಿರಬೇಕಾದ ಯಶ್ ಈ ವರ್ತನೆ ಎಷ್ಟು ಸರಿ ಅಂತ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಓರ್ವ ಅಮಾಯಕನ ಮೇಲೆ ಸಾಯುವಂತೆ ಹಲ್ಲೆ ಮಾಡಿದ ಆರೋಪಿಯೊಬ್ಬನನ್ನು ಆಲಂಗಿಸಿಕೊಂಡ ಯಶ್ ಈ ಸಮಾಜಕ್ಕೆ, ಯುವ ಸಮುದಾಯಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆಂಬಂಥಾ ಚರ್ಚೆಗಳೂ ನಡೆಯುತ್ತಿವೆ. ಅದಕ್ಕೆ ಕಾರಣವಾಗಿರೋದು ನಲಪಾಡನ ನಟೋರಿಟಿ!
ಈ ನಲಪಾಡ್ ಎಂಬಾತನ ಅಸಲೀ ಪ್ರವರಗಳನ್ನೊಮ್ಮೆ ಕೇಳಿದ ಮೇಲೂ ನಿಮಗೆ ಯಶ್ ಮಾಡಿದ್ದು ಸರಿ ಅನ್ನಿಸಿದರೆ ಯಾರ ಅಭ್ಯಂತರವೂ ಇಲ್ಲ. ಅದಕ್ಕೂ ಮೊದಲು ಈ ನಲಪಾಡನ ಪ್ರವರಗಳನ್ನೊಮ್ಮೆ ಓದಿಕೊಳ್ಳಿ…
ಒಂದು ಕಾಲಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಮಜ್ಜಿಗೆ ಮಾರುತ್ತಾ ನಂತರ ನಾನಾ ದಿಕ್ಕುಗಳಲ್ಲಿ ಉದ್ದಾರವಾದ ಫ್ಯಾಮಿಲಿ ಹ್ಯಾರಿಸ್ ಅವರದ್ದು. ಇಂಥಾ ಮಜ್ಜಿಗೆ ಬೇಸಿನ ಸಾಮ್ರಾಜ್ಯದ ಮರಿ ವಾರಸೂದಾರನಾಗಿರುವ ನಲಪಾಡನ ಗೊಂಡಾಗಿರಿ ಶಾಂತಿನಗರ ಏರಿಯಾದಲ್ಲಿ ಹೊಸತೇನೂ ಅಲ್ಲ. ಹ್ಯಾರಿಸ್ ಎರಡನೇ ಪುತ್ರನ ಕಾಟವನ್ನು ತಡೆಯಲಾಗದೇ ಕ್ಷೇತ್ರದ ಜನ ಬೇಸತ್ತಿದ್ದರು. ಅದಕ್ಕಾಗಿಯೇ ಅವನನ್ನು ದುಬೈಗೆ ಕಳಿಸಿದ್ದಾರೆ. ರಾಜ್ಯದ ಕೆಲವೇ ಕೋಟ್ಯಾಧಿಪತಿ ಶಾಸಕರಲ್ಲಿ ಒಬ್ಬರಾದ ಹ್ಯಾರಿಸ್ ಹಲವು ಕಾನೂನು ಬಾಹಿರ ಉದ್ಯಮದಲ್ಲಿ ತೊಡಗಿದ್ದಾರೆ. ಇದುವರೆಗೂ ಅವರ ಬೇನಾಮಿ ಆಸ್ತಿಗಳ ವಿವರ ಸಿಕ್ಕಿಲ್ಲ. ಮತ್ತು ಅವರ ಮೇಲಿರುವ ಥರ ಥರದ ಆರೋಪದ ಬಗ್ಗೆ ಹೆಚ್ಚಿನ ತನಿಖೆಯಾಗಲೂ ಸಾಧ್ಯವಿಲ್ಲವೇನೋ. ಆದರೆ ಈ ಭಾಗಗಳ ಜನ ಮಾತ್ರ ಹ್ಯಾರಿಸ್ ಫ್ಯಾಮಿಲಿ ಹಿನ್ನೆಲೆಯ ಬಗ್ಗೆ ಒಳ್ಳೆ ಮಾತುಗಳನ್ನಾಡುವುದೇ ಅಪರೂಪ!
ಇಂಥಾದ್ದೊಂದು ಕಳಂಕವನ್ನು ತೊಡೆದುಕೊಳ್ಳುವ ಪ್ರಯತ್ನವನ್ನು ಹ್ಯಾರಿಸ್ ಈ ಹಿಂದೆಯೇ ಮಾಡಿದ್ದರೆ ಈತನ ಮಕ್ಕಳಾರೂ ಒಳ್ಳೆ ಬುದ್ಧಿ ಕಲಿಯುತ್ತಿದ್ದರೇನೋ. ಆದರೆ ಅರಾಜಕತೆಯನ್ನೇ ಆಂತರ್ಯವಾಗಿಸಿಕೊಂಡು ಸಾಗಿ ಬಂದ ಹ್ಯಾರಿಸ್ ತಮ್ಮ ಮಕ್ಕಳು ಹಾದಿ ತಪ್ಪುತ್ತಿದ್ದರೂ ಅದು ತನ್ನ ಶ್ರೀಮಂತಿಕೆಯ ಟ್ರೇಡ್ಮಾರ್ಕು ಎಂಬಂತೆಯೇ ಸಂಭ್ರಮಿಸಿದ್ದರು. ಶಾಂತಿನಗರ ಏರಿಯಾದಲ್ಲಿ ಪಡ್ಡೆ ಹುಡುಗರನ್ನು ಜೊತೆಯಾಗಿಸಿಕೊಂಡ ನಲಪಾಡನಿಗೆ ನಡುವಿಗೊದ್ದು ಬುದ್ಧಿ ಹೇಳಿದ್ದರೆ ಖಂಡಿತಾ ಆಗ ಡ್ರಗ್ಸ್ ಮಾಫಿಯಾದ ಕಿಂಗ್ಪಿನ್ ಆಗುವುದರಿಂದ, ಸ್ವತಃ ತಾನೇ ಡ್ರಗ್ ಟಡಿಕ್ಷನ್ನಿನ ಪರಾಕಾಷ್ಠೆ ತಲುಪೋದರಿಂದ ಖಂಡಿತಾ ಪಾರು ಮಾಡ ಬಹುದಿತ್ತು. ಈವತ್ತಿಗೆ ಶಾಂತಿನಗರ ಏರಿಯಾದಲ್ಲಿನ ಜನ ಕಂಗಾಲಾಗಿ ನಿಂತಿದ್ದಾರಲ್ಲಾ? ಅದರಿಂದಲಾದರೂ ಅವರನ್ನು ಪಾರುಗಾಣಿಸಿದ ಪುಣ್ಯ ಖಂಡಿತಾ ಹ್ಯಾರಿಸ್ಗೆ ಬರುತ್ತಿತ್ತು.
ಆದರೆ ಈವತ್ತಿಗೆ ನಲಪಾಡ್ ಎಲ್ಲ ಹಂತಗಳನ್ನೂ ಮೀರಿ ಹೋಗಿದ್ದಾನೆ. ಡ್ರಗ್ಸ್ ವಿಚಾರದಲ್ಲಿಯೂ ಆತ ಉತ್ತುಂಗ ತಲುಪಿದ್ದಾನೆ. ಡ್ರಗ್ಸ್ ಅಡಿಕ್ಷನ್ನು ಹೇಗಿರುತ್ತದೆಂದರೆ, ಒಂದು ನಶೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತಾರೆ. ನಂತರದಲ್ಲಿ ಯಾವ ನಶೆಯೂ ಕಿಕ್ಕೇರಿಸದ ಹಂತ ತಲುಪಿದಾಗ ಹಾವಿನಿಂದ ಕಚ್ಚಿಸಿಕೊಂಡು ಮತ್ತೇರಿಸಿಕೊಳ್ಳುವ ಭಯಾನಕ ಹಂತ ತಲುಪುತ್ತಾರೆ. ಸ್ವತಃ ನಲಪಾಡ್ ಈವತ್ತು ಆ ಹಂತದಲ್ಲಿದ್ದಾನೆ. ಇಂಥವರು ಮಾನಸಿಕವಾಗಿ ಮೃಗಗಳಿಗಿಂತಲೂ ಕಡೆಯಾಗಿರುತ್ತಾರೆ. ನಶೆ ಏರದೆ ಮಾನಸಿಕ ಏರಿಳಿತವಾದ ಸಂದರ್ಭದಲ್ಲಿಯಂತೂ ಯಾರಾದರೂ ಕೈಗೆ ಸಿಕ್ಕರೆ ಕೊಂದೇ ಬಿಡುವ ಮನಸ್ಥಿತಿ ತಲುಪಿರುತ್ತಾರೆ. ವಿದ್ವತ್ ಮೇಲೆ ಹಲ್ಲೆ ನಡೆಸೋ ಸಂದರ್ಭದಲ್ಲಿಯೂ ನಲಪಾಡ್ ಆ ಸ್ಥಿತಿಯಲ್ಲಿದ್ದ. ವಿದ್ವತ್ತನ ಜೀವ ಉಳಿದಿರೋದಷ್ಟೇ ಪುಣ್ಯ!
ಇಂಥಾ ಘನ ವೃತ್ತಾಂತ ಹೊಂದಿರೋ ನಲಪಾಡನೊಂದಿಗೆ ಯಶ್ ಅವರದ್ದು ಎಂಥಾ ಸ್ನೇಹವೋ ಗೊತ್ತಿಲ್ಲ. ಅದು ಅವರ ಪೊರ್ಸನಲ್ ಮ್ಯಾಟರ್. ಆದರೆ ಇಂಥವರ ಜೊತೆಗಿನ ಖುಲ್ಲಂಖುಲ್ಲಾ ಸ್ನೇಹ ಯುವ ಅಭಿಮಾನಿ ಬಳಗಕ್ಕೆ ಯಾವ ಸಂದೇಶವನ್ನ ರವಾನಿಸಬಹುದೆಂಬುದು ಮಾತ್ರ ಎಲ್ಲರನ್ನೂ ಕಾಡುತ್ತಿರೋ ಧಾವಂತ!
#
No Comment! Be the first one.