ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆ.ಜಿ.ಎಫ್ 2 ಸಿನಿಮಾದಲ್ಲಿ ಬ್ಯುಜಿಯಾಗಿದ್ದಾರೆ. ಕೆ.ಜಿ.ಎಫ್ ಸಿನಿಮಾದ ಡಬ್ಬಿಂಗ್, ಪ್ರಮೋಷನ್ ಹಂತದಲ್ಲಿ ಟೀಂ ಜೊತೆ ವರ್ಕ್ ಮಾಡ್ತಿದ್ದಾರೆ. ಕೆ.ಜಿ.ಎಫ್ ಸಿನಿಮಾವೇನೋ ಕಂಪ್ಲೀಟ್ ಆಯ್ತು. ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆದ್ರೂ ಕೂಡ ಯಶ್ ಮುಂದಿನ ಸಿನಿಮಾದ ಒಂದು ಅಪ್ಡೇಟ್ ಕೂಡ ಅಭಿಮಾನಿಗಳಿಗೆ ಗೊತ್ತಾಗ್ತಿಲ್ಲ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ರ ನಾಜೂಕಾದ ಹೆಜ್ಜೆ.
- MAHANTESH MANDAGADDE
ಕೆ.ಜಿ.ಎಫ್ನಂತ ಸಿನಿಮಾದ ನಂತರ ಯಶ್ರ ಮುಂದಿನ ಯಾವ ಸಿನಿಮಾವಾದ್ರೂ ಅದರಷ್ಟೇ ತೂಕವಿರಬೇಕು. ಜೊತೆಗೆ ಅವರು ಒಪ್ಪಿಕೊಳ್ಳೋ ಮುಂದಿನ ಸಿನಿಮಾಗೆ ಅಷ್ಟೇ ಸ್ಕೋಪ್ ಇರುತ್ತೆ. ಹೀಗಾಗಿ ಮುಂದಿನ ಸಿನಿಮಾವನ್ನ ಸೆಲೆಕ್ಟ್ ಮಾಡೋಕೆ ಯಶ್ ಕಥೆ, ಡೈರೆಕ್ಟರ್, ಎಲ್ಲವನ್ನೂ ತಾಳೆ ಹಾಕೆ ನೋಡಬೇಕಾಗಿದೆ.
ಕೆಲ ಟಾಲಿವುಡ್ ನಿರ್ದೇಶಕರ ಹೆಸರುಗಳು ಕೇಳಿ ಬಂದಿದ್ದು ಅವರ ಜೊತೆ ರಾಕಿ ಬಾಯ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಈಗಾಗಲೇ ಸೌತ್ ಸಿನಿ ದುನಿಯಾದಲ್ಲಿ ಸೌಂಡ್ ಮಾಡಿತ್ತು. ಆದ್ರೆ ಅದೆಲ್ಲಾ ಅಂತೆ, ಕಂತೆ ಅನ್ನೋದು ಸದ್ಯದ ಸುದ್ಧಿ. ಆದ್ರೆ ಅಷ್ಟು ಈಸಿಯಾಗಿ ಮುಂದಿನ ಸಿನಿಮಾದ ಬಗ್ಗೆ ಅಪ್ ಡೇಟ್ ಕೊಡಲ್ಲ ರಾಕಿ ಬಾಯ್ ಅಂತಾ ಗಾಂಧಿನಗರದ ಮೂಲಗಳು ಹೇಳ್ತಿವೆ. ಸದ್ಯ ಕೆ.ಜಿ.ಎಫ್ 2 ಸಿನಿಮಾದ ಮೇಲೆ ಯಶ್ ಫೋಕಸ್ ಮಾಡ್ತಿದ್ದಾರೆ. ಕೆ.ಜಿ.ಎಫ್ಗಿಂತಲೂ ದೊಡ್ಡ ಮಟ್ಟದಲ್ಲಿ ಪಾರ್ಟ್ 2 ಪ್ರೊಮೋಷನ್ ಮಾಡೋಕೆ ಸಜ್ಜಾಗಿದ್ದಾರೆ. ಅದ್ರ ಮಧ್ಯೆಯೇ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಯೋಚನೆ ಮಾಡ್ತಿದ್ದಾರೆ.
ಹಲವು ನಿರ್ದೇಶಕರು, ಕಥೆಗಾರರು ಯಶ್ ಬಳಿ ಹೋಗಿದ್ದು, ಎಲ್ಲಾ ತಾಳೆ ಮಾಡಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಶ್ ನಿರ್ಧಾರ ಮಾಡಲಿದ್ದಾರೆ. ಜುಲೈ 16ರಂದು ಕೆ.ಜಿ.ಎಫ್ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅದಾದ ನಂತರವೇ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಆಗಸ್ಟ್ನಲ್ಲಿ ಯಶ್ರ ಮುಂದಿನ ಸಿನಿಮಾದ ಅಪ್ಡೇಟ್ ಕೊಡ್ತಾರೆ ಅಂತಾ ಚಿತ್ರರಂಗದ ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ. ಮಫ್ತಿ ಮೇಕರ್ ನರ್ತನ್, ಪುರಿ ಜಗನ್ನಾಥ್ ಸೇರಿದಂತೆ ಹಲವು ಬಿಗ್ ನಿರ್ದೇಶಕರ ಹೆಸರುಗಳು ಯಶ್ರ ಮುಂದಿನ ಸಿನಿಮಾದ ಲಿಸ್ಟ್ನಲ್ಲಿವೆ. ಆದ್ರೆ ಯಶ್ ಯಾರ ಜೊತೆ ಸಿನಿಮಾ ಮಾಡ್ತಾರೆ ಅನ್ನೋದು ಆಗಸ್ಟ್ನಲ್ಲಿ ಗೊತ್ತಾಗಲಿದೆ.
No Comment! Be the first one.