ಹಿರಿಯ ನಟ ಕೆ. ಶಿವರಾಮ್ ಅವರ ಅಳಿಯ ಕಮ್ ನಟ ಪ್ರದೀಪ್ ರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮುಂದಿನ ಚಿತ್ರ ಎಲ್ಲೋ ಬೋರ್ಡ್ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ ಈ ಪೋಸ್ಟರನ್ನು ನಟ ಕಿಚ್ಚ ಸುದೀಪ್, ತಮ್ಮ ಟ್ವಿಟರ್ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲದೇ ನಟ ಪ್ರದೀಪ್ ಹಾಗೂ ಇಡೀ ಚಿತ್ರತಂಡಕ್ಕೂ ಶುಭಾಶಯವನ್ನು ತಿಳಿಸಿದ್ದಾರೆ ಕಿಚ್ಚ ಸುದೀಪ್.
Wshn u happiness n success sunny..
Mch luv to u always.
Happy returns 🤗🤗🤗🎉@pradeepbogadi 🥂
Best wshs to th entire team of #yellowBoard… Rise & Shine. 🤗🤗 pic.twitter.com/onT1Gfkk9y— Kichcha Sudeepa (@KicchaSudeep) August 24, 2019
ಕರ್ಮಷಿಯಲ್ ಗಾಡಿಗಳಿಗೆ ಎಲ್ಲೋ ಬೋರ್ಡು ಇರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಚಿತ್ರಕ್ಕೆ ಈ ಟೈಟಲ್ ಇಟ್ಟಿರೋದು ಹಾಗೆಯೇ ಪೋಸ್ಟರ್ ಡಿಸೈನ್ ಮಾಡಿರೋದು ಕೂಡ ವಿಭಿನ್ನವಾಗಿದೆ. ಗೂಗಲ್ ಮ್ಯಾಪ್, ಯುಬಿ ಸಿಟಿ, ವಿಧಾನಸೌದ, ರಕ್ತಸಿಕ್ತ ನಾಯಕ ಮುಖ ಮಿಶ್ರಿತ ಪೋಸ್ಟರ್ ಇದಾಗಿರೋದರಿಂದ ಪ್ರೇಕ್ಷಕರಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಉಂಟು ಮಾಡಿದೆ. ಫಸ್ಟ್ Rank ರಾಜು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ತ್ರಿಲೋಕ್ ರೆಡ್ಡಿ ಎಲ್ಲೋ ಬೋರ್ಡ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ವಿಂಟೇಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗೌತಮ್ ನಿರ್ಮಾಣ ಮಾಡುತ್ತಿದ್ದಾರೆ.
No Comment! Be the first one.