ನೋ ಡೌಟ್! ಡಾ. ರಾಜ್ ಮೊಮ್ಮಗ ಯುವ ರಾಜ್ಕುಮಾರ್ ಕನ್ನಡ ಸಿನಿಮಾರಂಗದ ಇತಿಹಾಸದ ಪುಟಗಳಲ್ಲಿ ಯಶಸ್ವೀ ನಾಯಕನಟನಾಗಿ ದಾಖಲೆ ಬರೆಯುತ್ತಾರೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಮೊದಲ ನೋಟಕ್ಕೇ ಸೆಳೆಯುವಂತಾ ಮೈಕಟ್ಟು, ಕಣ್ಣಿನ ತೀಕ್ಷ್ಣತೆಯ ಫಸ್ಟ್ ಲುಕ್ ಇಂದು ರಿಲೀಸಾಗಿದೆ. ಸಿನಿಮಾಗಾಗಿ ಯುವ ಸಾಕಷ್ಟು ಶ್ರಮಿಸಿ, ತಯಾರಾಗಿದೆ ಅನ್ನೋದನ್ನು ಇದೊಂದು ಫೋಟೋ ಸಾಕ್ಷೀಕರಿಸಿದೆ.
ರಾಘವೇಂದ್ರ ರಾಜ್ ಕುಮಾರ್ ಯುವ ಹೀರೋ ಆಗಿ ಲಾಂಚ್ ಆಗುತ್ತಿರುವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. “ಅಪ್ಪಾಜಿ ಹುಟ್ಟಿದ ದಿನವೇ ನನ್ನ ಮಗನನ್ನು ಸಿನಿಮಾಗೆ ಪರಿಚಯ ಮಾಡಿಸಬೇಕು ಅನ್ನೋದು ನನಗೆ ಮೊದಲಿಂದಲೂ ಬಯಕೆಯಾಗಿತ್ತು. ಕಳೆದ ವರ್ಷ ಅವನ ಮದುವೆ ಓಡಾಟದಲ್ಲಿದ್ದೆವು. ಈ ವರ್ಷ ಅದು ಸಾಧ್ಯವಾಗುತ್ತಿದೆ. ನಮ್ಮ ಕುಟುಂಬದ ಪ್ರತಿಯೊಬ್ಬರನ್ನೂ ಪ್ರೇಕ್ಷಕ ಮಹಾಪ್ರಭುಗಳು ಸ್ವೀಕರಿಸಿದ್ದಾರೆ. ನನ್ನ ಕಿರಿಯ ಮಗನನ್ನು ಕೂಡಾ ಆಶೀರ್ವದಿಸುತ್ತಾರೆ ಅನ್ನೋ ನಂಬಿಕೆ ಇದೆ” ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.
ಸಿನಿಮಾಗೆ ‘ಯುವ ನಂ೧’ ಎನ್ನುವ ವರ್ಕಿಂಗ್ ಟೈಟಲ್ಲನ್ನಷ್ಟೇ ಇಡಲಾಗಿದ್ದು, ಸಿನಿಮಾದ ಶೀರ್ಷಿಕೆಯನ್ನು ಇನ್ನೂ ಅನೌನ್ಸ್ ಮಾಡಿಲ್ಲ. ಪುನೀತ್ ರುದ್ರನಾಗ್ ನಿರ್ದೇಶನದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀವಿದೆ. ಉಳಿದಂತೆ ಚಿತ್ರ ಯಾವಾಗ ಶೂಟಿಂಗ್ ಆರಂಭಿಸಲಿದೆ? ಯಾರೆಲ್ಲಾ ಕಲಾವಿದರಿರುತ್ತಾರೆ ಎಂಬಿತ್ಯಾದಿ ವಿವರಗಳು ಇನ್ನೂ ಹೊರಬಂದಿಲ್ಲ.