ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಿಗಂತ್, ಸಂತೋಷ್ ಆನಂದ್ ರಾಮ್ ಜತೆಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ ಅದಕ್ಕೆ ಸಂತೋಷ್ ಆನಂದ್ ರಾಮ್ ಅವರ ಯುವರತ್ನ ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಅಭಿನಯಿಸಲಿದ್ದಾರೆಂಬ ಮಹತ್ವದ ಕಾರಣ ಚಿತ್ರತಂಡದಿಂದ ದೊರೆತಿದೆ.

https://twitter.com/SanthoshAnand15/status/1151054792224985088

ಹೌದು.. ಯುವರತ್ನ ಟೀಮಿಗೆ ದಿಗಂತ್ ಕೂಡ ಎಂಟ್ರಿ ಕೊಟ್ಟಿದ್ದು, ಚಿತ್ರದಲ್ಲಿ ದಿಗಂತ್ ಬೆಂಗಳೂರಿನ ಖಡಕ್ ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಯುವರತ್ನ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿದ್ದು, ಆಧುನಿಕ ಶಿಕ್ಷಣದಲ್ಲಿ ನಡೆಯುತ್ತಿರುವ ಎಜುಕೇಷನ್ ಮಾಫಿಯಾವನ್ನು ಎತ್ತಿ ತೋರಿಸಲಿದೆ. ಅದಕ್ಕನುಗುಣವಾಗಿ ದಿಗಂತ್ ಗೆ ಜಿಲ್ಲಾಧಿಕಾರಿ ಪಾತ್ರವನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಜಿಲ್ಲಾಧಿಕಾರಿಯಾದ ದಿಗಂತ್ ಗೆ ಯುವರತ್ನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿದ್ದು, ಅವೆಲ್ಲವನ್ನೂ ದಿಗಂತ್ ಹೇಗೆ ನಿಭಾಯಿಸಬಹುದೆಂಬುದೇ ಸದ್ಯದ ಕೌತುಕ. ಅಂದಾಜು 40 ನಿಮಿಷಗಳ ಕಾಲ ದಿಗಂತ್ ಸ್ಕ್ರೀನ್ ನಲ್ಲಿ ಮಿಂಚಲಿದ್ದು, ಇವರ ಪಾತ್ರವೇ ಯುವರತ್ನಕ್ಕೆ ಹೊಸ ತಿರುವನ್ನು ನೀಡಲಿದೆಯಂತೆ.

CG ARUN

ಕೋಟಿಗೊಬ್ಬ ಪಾರ್ಟ್ ಮೂರಕ್ಕೆ ಆರ್ಮುಗಂ ರವಿಶಂಕರ್!

Previous article

ಡಿ ಬಾಸ್ ಟೀಮಿಗೆ ಕೆಜಿಎಫ್ ಭುವನ್ ಗೌಡ!

Next article

You may also like

Comments

Leave a reply

Your email address will not be published. Required fields are marked *