ಸೋಮಾರಿಯೇ ‘ರಾಜರತ್ನಾಕರ’ ಆಗುವ ಕಥೆ

Picture of Cinibuzz

Cinibuzz

Bureau Report

ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ.. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನಿಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ರಾಜರತ್ನಾಕರ ಸಿನಿಮಾ. ಈ ಸಿನಿಮಾದಲ್ಲಿ ಬೆಂಗಳೂರಿನ ಮಧ್ಯಮ ವರ್ಗದವರ ಕಥೆಯನ್ನ ಒಳಗೊಂಡಿದೆ. ದುರಹಂಕಾರಿಯೊಬ್ಬನ ಕಥೆ. ಸೋಮಾರಿತನದಿಂದ ಬಂದಂತ ದುರಹಂಕಾರದ ಪರಮಾವಧಿ. ಆದರೆ ಮುಂದೆ ಆತ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬ ಕಥೆಯನ್ನ ರಾಜರತ್ನಕರದಲ್ಲಿ ತೋರಿಸಿಲಾಗಿದೆ. ಈ ರೀತಿಯ ಕ್ಯಾರೆಕ್ಟರ್ ಹಲವು ಮನೆಗಳಲ್ಲಿ ಇರಬಹುದು. ಅವರೆಲ್ಲರಿಗೂ ಈ ಕಥೆ ಕನೆಕ್ಟ್ ಆಗುತ್ತದೆ. ಇದೊಂದು ಪಕ್ಕ ಕಮರ್ಷಿಯಲ್ ಸಿನಿಮಾ ಆಗಿದೆ.

ಚೌಮುದ ಬ್ಯಾನರ್ ಅಡಿ ಚೊಚ್ಚಲ ಬಾರಿಗೆ ನಿರ್ಮಾಣವಾಗಿರುವ ರಾಜರತ್ನಾಕರ ಚಿತ್ರಕ್ಕೆ ಜಯರಾಮ ಸಿ .ಮಾಲೂರು ಅವರು ಬಂಡವಾಳ ಹೂಡಿದ್ದಾರೆ. ವೀರೇಶ್ ಬೊಮ್ಮ ಸಾಗರ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಬಂದಂತ ಮೊದಲ ಸಿನಿಮಾ. ವೀರೇಶ್ ಬೊಮ್ಮ ಸಾಗರ ಅವರು ಮೂಲತಃ ಬಾದಾಮಿ ಕಡೆಯವರು.

ಹನ್ನೆರಡು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಅನುಭವವಿದೆ. ಸಿನಿಮಾ, ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಇನ್ನಷ್ಟು ಓದಿರಿ

Scroll to Top