ಸೈರಾ ನರಸಿಂಹ ರೆಡ್ಡಿ ಸೆಟ್ಟಿಗೆ ಬೆಂಕಿ ಬಿತ್ತು!
‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದ ಸೆಟ್ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ಮಧ್ಯರಾತ್ರಿ ಬೆಂಕಿ ಸಂಭವಿಸಿದ್ದು, […]
‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದ ಸೆಟ್ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ಮಧ್ಯರಾತ್ರಿ ಬೆಂಕಿ ಸಂಭವಿಸಿದ್ದು, […]
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಯನತಾರಾ ಅಭಿನಯನದ ದರ್ಬಾರ್ ಚಿತ್ರದ ಶೂಟಿಂಗ್ ವೇಳೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಚಿತ್ರೀಕರಣ ನಿಲ್ಲಿಸಲಾಗಿದೆ. ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕಾಲೇಜ್ ವಿದ್ಯಾರ್ಥಿಗಳ ಗುಂಪೊಂದು ಸೆಟ್ನಲ್ಲಿ ತಮ್ಮ ಮೊಬೈಲ್ಗಳಲ್ಲಿ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿತ್ತು. ಈ ವೇಳೆ ಇದನ್ನು ಗಮನಿಸಿದ ಚಿತ್ರತಂಡದ ಸಿಬ್ಬಂದಿ ಫೋಟೋ ತೆಗೆಯದಂತೆ ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು ಉದ್ರಿಕ್ತಗೊಂಡ ವಿದ್ಯಾರ್ಥಿಗಳುಶೂಟಿಂಗ್ ಸೆಟ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲದೇ ಶೂಟಿಂಗ್ ಸ್ಥಳವನ್ನು ಸ್ಥಳಾಂತರಮಾಡಿದ್ದಾರೆ. ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಎ.ಆರ್.ಮುರುಗದಾಸ್ ಹಾಗೂ ರಜನಿಕಾಂತ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆಚಂದ್ರಮುಖಿ, ಕುಸೇಲನ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದ ನಯನತಾರ ಮತ್ತೊಮ್ಮೆ ಜೋಡಿಯಾಗಿದ್ದಾರೆ.
ಜಯಂ ರವಿಯವರ 24ನೇ ಸಿನಿಮಾ ಘೋಷಣೆಯಾಗಿದ್ದು, ಕೋಮಲಿ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಜಯಂ ರವಿ ಮತ್ತು ಕಾಜಲ್ ಅಗರ್ ವಾರ್ ಮೊಟ್ಟಮೊದಲ ಬಾರಿಗೆ ಜೋಡಿಯಾಗಲಾಗಿದ್ದಾರೆ.
ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಾಯಿರೋ ಅದ್ಧೂರಿ ಸಿನಿಮಾ ಯುವರತ್ನ. ರಾಜಕುಮಾರ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗಿದ್ದಾರೆ. ವಿಶೇಷ ಅಂದ್ರೆ ಈಗಾಗಲೇ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸ್ಪೆಷಲ್ ವ್ಯಕ್ತಿಯೊಬ್ಬರು ಚಿತ್ರತಂಡ ಸೇರಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಹತ್ತಾರು ಸಿನಿಮಾಗೆ ಆ್ಯಕ್ಷನ್ ಹೇಳಿದ್ದ ನಿರ್ದೇಶಕ ಭಗವಾನ್ ಸ್ಪೆಷಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಈ ಬಗ್ಗೆ ಸ್ವತಃ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ದೊರೆ ಭಗವಾನ್ ವಿನಯ್ ರಾಘವೇಂದ್ರರಾಜ್‌ಕುಮಾರ್ ನಟಿಸಿದ್ದ ‘ಅನಂತು ವರ್ಸಸ್ ನುಸ್ರತ್’ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಮತ್ತೆ ಯುವರತ್ನ ಸಿನಿಮಾಗೆ ಬಣ್ಣ ಹಚ್ಚಿದ್ದು, ಯುವರತ್ನ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ವಿನಯ್ ರಾಜ್‌ಕುಮಾರ್ ಕರಿಕೋಟು ಹಾಕಿ ಅನಂತುv/s ನುಸ್ರತ್ ಚಿತ್ರದಲ್ಲಿ ಅನಂತು ಆಗಿ ಕೋರ್ಟ್ ರೂಂನಲ್ಲಿ ವಾದ ಮಾಡಿದ್ಮೇಲೆ ಈಗ ರಗಡ್ ಬಾಕ್ಸರ್ ಆಗಿಬಿಟ್ಟಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ ಫುಲ್ ಫಿಟ್ ಅಂಡ್ ಫೈನ್ ಆಗಿ ಎಂಟ್ರಿ ಕೊಡಲಿದ್ದಾರೆ. ಬಾಕ್ಸಿಂಗ್ ಗೇಮ್ ಸುತ್ತ ನಡೆಯುವ, ಸಾಮಾನ್ಯ ಹುಡುಗ ಬಾಕ್ಸರ್ಆಗುವ ಕತೆಯಲ್ಲಿ ಪಾತ್ರ ಮಾಡಲಿದ್ದಾರೆ ವಿನಯ್. ಇನ್ನೂ ಹೆಸರಿಡದ, ಪುಷ್ಕರ್ ನಿರ್ಮಾಣದ 11ನೇ ಚಿತ್ರ ಸೆಟ್ಟೇರುತ್ತಿದ್ದು. ಕಿರಿಕ್ ಪಾರ್ಟಿ ಚಿತ್ರದ ಸಿನಿಮಾಟೋಗ್ರಾಫರ್‌ಕರಮ್ ಚಾವ್ಲಾ ಬಹಳ ವರ್ಷಗಳಿಂದ ರೆಡಿಮಾಡಿಕೊಂಡಿರೋ ಒಂದು ಉತ್ತಮ ಕಥೆಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಅವರ ಬಾಕ್ಸರ್ ಗೆಟಪ್ ರಿವೀಲ್ ಆಗಿದ್ದು, ಹುಟ್ಟುಹಬ್ಬದಂದೇ ಸಿನಿಮಾದ ಮೊದಲು ಲುಕ್ ನ ಫೋಸ್ಟರ್ ಸಹ
ಬ್ರಿಟೀಷ್ ನಟಿ ಆ್ಯಮಿ ಜಾಕ್ಸನ್ ಇತ್ತೀಚಿಗೆ ತನ್ನ ಪ್ರಿಯಕರ ಜಾರ್ಜ್ ನೊಂದಿಗೆ ಮದುವೆಯಾಗುವುದಾಗಿ ಘೋಷಿಸಿದ್ದರು. ಅಭಿಮಾನಿಗಳು ಯಾವಾಗ ಆ್ಯಮಿ ಮದುವೆಯಾಗುತ್ತಾರೆ ಎಂದು ಕೌತುಕದಿಂದ ಕಾಯುವ ಬೆನ್ನಲ್ಲೇ ಆ್ಯಮಿ
ಮಣಿರತ್ನಂ ಕನಸಿನ ಕೂಸು ಪೊನ್ನಿಯಿನ್ ಸೆಲ್ವನ್ ಈಗಾಗಲೆ ಪ್ರೀ ಪ್ರೊಡಕ್ಷನ್ ಮುಗಿಸಿಕೊಂಡು, ಪಾತ್ರಧಾರಿಗಳ ಆಯ್ಕೆಯಲ್ಲಿ ಪುಲ್ ಬ್ಯುಸಿಯಾಗಿದೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ
ವಿಶ್ವದಾದ್ಯಂತ ತೆರೆಕಂಡು ಭಾರತದ ಸಿನಿಮಾ ಇಂಡಸ್ಟ್ರಿಯನ್ನೇ ಬೆಕ್ಕಸ ಬೆರಗಾಗುವಂತೆ ಕೆಜಿಎಫ್ ಸಿನಿಮಾ ಮಾಡಿತ್ತು. ಚಿತ್ರದ ಮೇಕಿಂಗ್ ನಿಂದ, ಮ್ಯೂಸಿಕ್ ಜೊತೆ ಮೇನ್ ಆಕರ್ಷಣೆ ಅಂದರೆ ರಾಕಿಯ ಹುಚ್ಚೆಬ್ಬಿಸುವ
ಕನ್ನಡದ ಸಾಕಷ್ಟು ನಟಿಯರು ಈಗ ತೆಲುಗಿನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅದೇ ರೀತಿ ನಟಿ ಕಿರಗೂರಿನ ಗಯ್ಯಾಳಿ ಖ್ಯಾತಿಯ ಸುಕೃತಾ ವಾಗ್ಲೆ ಸಹ ಟಾಲಿವುಡ್ ನಲ್ಲಿ ತಮ್ಮ ಸಿನಿಮಾ
ಕರಾವಳಿ ಭಾಗದಿಂದ ಕನ್ನಡದಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದ್ದು, ಅದಕ್ಕೆ ‘ಒಂದು ಶಾಲೆಯ ಕಥೆ’ ಎಂದು ಟೈಟಲ್ ಇಡಲಾಗಿದೆಯಂತೆ. ಇದೊಂದು ವಿಭಿನ್ನ, ಹೊಸತನದಿಂದ ಕೂಡಿರುವಕನ್ನಡ ಸಿನಿಮಾವಾಗಿದ್ದು, ಸೃಷ್ಠಿ ಕ್ರಿಯೇಷನ್ಸ್