ಬ್ರಹ್ಮಚಾರಿಗೆ ಅನ್ಮೋಲ್‌ ಸಾಥ್

Picture of Cinibuzz

Cinibuzz

Bureau Report

ವಿಶ್ವದಾದ್ಯಂತ ತೆರೆಕಂಡು ಭಾರತದ ಸಿನಿಮಾ ಇಂಡಸ್ಟ್ರಿಯನ್ನೇ ಬೆಕ್ಕಸ ಬೆರಗಾಗುವಂತೆ ಕೆಜಿಎಫ್ ಸಿನಿಮಾ ಮಾಡಿತ್ತು. ಚಿತ್ರದ ಮೇಕಿಂಗ್ ನಿಂದ, ಮ್ಯೂಸಿಕ್ ಜೊತೆ ಮೇನ್ ಆಕರ್ಷಣೆ ಅಂದರೆ ರಾಕಿಯ ಹುಚ್ಚೆಬ್ಬಿಸುವ ಡೈಲಾಗುಗಳು. ಒಂದೆಡೆ ಗಡ್ದದಾರಿಯಾಗಿ ರಾಕಿಂಗ್ ಸ್ಟಾರ್ ಮಿಂಚಿದ್ರೆ, ಚಿತ್ರದಲ್ಲಿ ಜೂನಿಯರ್ ರಾಕಿಯಾಗಿ ಮಾಸ್ಟರ್ ಅನ್ಮೋಲ್ ಮಿಂಚಿದ್ರು. ಖಡಕ್ ಮಾಸ್ ಡೈಲಾಗ್ ಡೆಲಿವೆರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ರು ಕೂಡ. ಇದೀಗ ಮಾಸ್ಟರ್ ಅನ್ಮೋಲ್ ‘ಬ್ರಹ್ಮಚಾರಿ’ಯ ಜೊತೆಯಾಗಿದ್ದಾನೆ.

ಹೌದು ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ರಹ್ಮಚಾರಿ ಚಿತ್ರದಲ್ಲಿ ಅನ್ಮೋಲ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು ಚಿತ್ರದಲ್ಲಿ ಯಾವ ರೋಲ್ನಲ್ಲಿ ಅನ್ಮೋಲ್ ಮಿಂಚಲಿದ್ದಾನೆ ಅನ್ನೋದು ಕುತೂಹಲ ಮೂಡಿಸಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್, ಕಂ ಕಾಮಿಡಿ ಚಿತ್ರವಾಗಿದ್ದು ಸತೀಶ್ ಹಾಗೂ ಅನ್ಮೋಲ್ ಕಾಂಬಿನೇಷನ್ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಚಿತ್ರದಲ್ಲಿ ಅಕ್ಷತಾ ಶ್ರೀನಿವಾಸ್, ಸಾಧುಕೋಕಿಲಾ, ಗಿರಿಜಾ ಲೋಕೆಶ್ ಸೇರಿದಂತೆ ಬಹುತೇಕರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಚಂದ್ರ ಮೋಹನ್ನಿರ್ದೇಶನವಿದ್ದು ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top