ಸೈರಾ ನರಸಿಂಹ ರೆಡ್ಡಿ ಸೆಟ್ಟಿಗೆ ಬೆಂಕಿ ಬಿತ್ತು!

Picture of Cinibuzz

Cinibuzz

Bureau Report

‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದ ಸೆಟ್ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ಮಧ್ಯರಾತ್ರಿ ಬೆಂಕಿ ಸಂಭವಿಸಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ತೆಲಂಗಾಣದ ಕೊಕೋಪೇಟ್ನ ಅಲ್ಲು ಅರವಿಂದ್ ಫಾರ್ಮ್ನಲ್ಲಿ ಸೆಟ್ ಹಾಕಲಾಗಿತ್ತು. ಇದೇ ಸೆಟ್ನಲ್ಲಿ ಚಿರಂಜೀವಿ, ಅಮಿತಾಬ್ ಬಚ್ಚನ್ ನಡುವಿನ ದೃಶ್ಯ ಚಿತ್ರೀಕರಣ ನಡೆಯಬೇಕಿತ್ತು. ಸಿನಿಮಾದ ಮೇಜರ್ ಸೆಟ್ಇದಾಗಿತ್ತು, ಟೀಸರನಲ್ಲೂ ಈ ಸೆಟ್ ಎಲ್ಲರ ಗಮನ ಸೆಳೆದಿತ್ತು. ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರವು ಹಿಸ್ಟೊರಿಕಲ್ ಸಿನಿಮಾ ಇದಾಗಿದೆ. ನಾಯಕ ನಟ ಚಿರಂಜೀವಿ, ಅಮಿತಾಬ್ ಬಚ್ಚನ್, ಕನ್ನಡದ ಕಿಚ್ಚ ಸುದೀಪ್  ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಸುರೇಂದ್ರ ರೆಡ್ಡಿ ನಿರ್ದೇಶನ 200 ಕೋಟಿ ಬಜೆಟ್ ಸಿನಿಮಾ ಇದು.

ಇನ್ನಷ್ಟು ಓದಿರಿ

Scroll to Top