ಮಣಿರತ್ನಂ ಕನಸಿನ ಚಿತ್ರಕ್ಕೆ ಅಮಲಾ ಪೌಲ್ ಆಯ್ಕೆ!

Picture of Cinibuzz

Cinibuzz

Bureau Report

ಮಣಿರತ್ನಂ ಕನಸಿನ ಕೂಸು ಪೊನ್ನಿಯಿನ್ ಸೆಲ್ವನ್ ಈಗಾಗಲೆ ಪ್ರೀ ಪ್ರೊಡಕ್ಷನ್ ಮುಗಿಸಿಕೊಂಡು, ಪಾತ್ರಧಾರಿಗಳ ಆಯ್ಕೆಯಲ್ಲಿ ಪುಲ್ ಬ್ಯುಸಿಯಾಗಿದೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕೀರ್ತಿ ಸುರೇಶ್, ಜಯಮ್ ರವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವುದು ನಿಕ್ಕಿಯಾಗಿದೆ. ಈತನ್ಮಧ್ಯೆ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅಮಲಾ ಪೌಲ್ ಕೂಡ ಆಯ್ಕೆಯಾಗಿದ್ದಾರೆ.

ಸದ್ಯ ಅಮಲಾ ಅಧೋ ಅಂದ ಪರವಾಯಿ ಪೊಲಾ, ಅದಾಲ್, ಕಡವೆರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕವೇ ಪೊನ್ನಿಯಿನ್ ಸೆಲ್ವಂ ನ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಈ ವಿಚಾರದ ಕುರಿತು ಅಧಿಕೃತ ಮಾಹಿತಿಯೂ ಹೊರ ಬೀಳಲಿದೆ.ಮಣಿರತ್ನ ನಿರ್ದೇಶನದ ಈ ಸಿನಿಮಾವು ಐತಿಹಾಸಿಕ ಸಿನಿಮಾವಾಗಿದ್ದು, ಕಲ್ಕಿಯವರ ಹೆಸರಾಂತ ಕಾದಂಬರಿಯನ್ನು ಆಧರಿಸಿದೆ.

ಇನ್ನಷ್ಟು ಓದಿರಿ

Scroll to Top