ಆ್ಯಮಿ ಜಾಕ್ಸನ್ ಎಂಗೇಜ್ ಆದ್ರು!

Picture of Cinibuzz

Cinibuzz

Bureau Report

ಬ್ರಿಟೀಷ್ ನಟಿ ಆ್ಯಮಿ ಜಾಕ್ಸನ್ ಇತ್ತೀಚಿಗೆ ತನ್ನ ಪ್ರಿಯಕರ ಜಾರ್ಜ್ ನೊಂದಿಗೆ ಮದುವೆಯಾಗುವುದಾಗಿ ಘೋಷಿಸಿದ್ದರು. ಅಭಿಮಾನಿಗಳು ಯಾವಾಗ ಆ್ಯಮಿ ಮದುವೆಯಾಗುತ್ತಾರೆ ಎಂದು ಕೌತುಕದಿಂದ ಕಾಯುವ ಬೆನ್ನಲ್ಲೇ ಆ್ಯಮಿ ಮತ್ತು ಜಾರ್ಜ್ ಉಂಗುರ ಬದಲಿಸಿಕೊಂಡಿದ್ದಾರೆ.

ಲ್ಯಾವಿಶ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇವರ ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು. ಈ ಹಿಂದೆ 2019ರಲ್ಲಿ ಆ್ಯಮಿ ಜಾಕ್ಸನ್ ಗೆ ಲಂಡನ್ನಿನ ಬ್ಯುಸಿನೆಸ್ ಮನ್ ಜಾರ್ಜ್ ಜಾಂಬಿಯಾದಲ್ಲಿ ಪ್ರಪೋಸ್ ಮಾಡಿದ್ದರು. ಅಲ್ಲದೇ ಮದುವೆಗೆ ಮುನ್ನವೇ ಆ್ಯಮಿ ಗರ್ಭವತಿಯೂ ಆಗಿದ್ದರು. ಗರ್ಭಿಣಿಯಾಗಿಯೇ ಆ್ಯಮಿ ನಿಶ್ಚಿತಾರ್ಥವನ್ನು ಮುಗಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆ್ಯಮಿ ಉಂಗುರ ಬದಲಿಸಿಕೊಂಡು ಆ್ಯಮಿ ಜಾರ್ಜ್ ನೊಂದಿಗೆ ಸಂತೋಷದಿಂದ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ನೃತ್ಯ ಮಾಡಿದ ವಿಡಿಯೋ ಶೇರ್ ಆಗಿದೆ. ಆ್ಯಮಿ ಜಾಕ್ಸರ್ ರಜನಿ ಕಾಂತ್ ನಟನೆಯ 2.0 ನಲ್ಲಿಯೂ ನಟಿಸಿದ್ದರು. ಕನ್ನಡದ ದಿ. ವಿಲನ್ ಸಿನಿಮಾದಲ್ಲಿಯೂ ನಟಿಸಿದ್ದರು.

ಇನ್ನಷ್ಟು ಓದಿರಿ

Scroll to Top