ದರ್ಬಾರ್ ಶೂಟಿಂಗ್ ನಲ್ಲಿ ಕಾಲೇಜು ಹುಡುಗರ ದಾಂದಲೆ!

Picture of Cinibuzz

Cinibuzz

Bureau Report

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಯನತಾರಾ ಅಭಿನಯನದ ದರ್ಬಾರ್ ಚಿತ್ರದ ಶೂಟಿಂಗ್ ವೇಳೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಚಿತ್ರೀಕರಣ ನಿಲ್ಲಿಸಲಾಗಿದೆ. ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕಾಲೇಜ್ ವಿದ್ಯಾರ್ಥಿಗಳ ಗುಂಪೊಂದು ಸೆಟ್ನಲ್ಲಿ ತಮ್ಮ ಮೊಬೈಲ್ಗಳಲ್ಲಿ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿತ್ತು. ಈ ವೇಳೆ ಇದನ್ನು ಗಮನಿಸಿದ ಚಿತ್ರತಂಡದ ಸಿಬ್ಬಂದಿ ಫೋಟೋ ತೆಗೆಯದಂತೆ ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು ಉದ್ರಿಕ್ತಗೊಂಡ ವಿದ್ಯಾರ್ಥಿಗಳುಶೂಟಿಂಗ್ ಸೆಟ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲದೇ ಶೂಟಿಂಗ್ ಸ್ಥಳವನ್ನು ಸ್ಥಳಾಂತರಮಾಡಿದ್ದಾರೆ.

ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಇದೇ ಮೊದಲ ಬಾರಿಗೆ .ಆರ್.ಮುರುಗದಾಸ್ ಹಾಗೂ ರಜನಿಕಾಂತ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆರಜನಿಕಾಂತ್ ಜೊತೆಚಂದ್ರಮುಖಿಕುಸೇಲನ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದ ನಯನತಾರ ಮತ್ತೊಮ್ಮೆ ಜೋಡಿಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top