ಪ್ರೇಕ್ಷಕರ ಪ್ರೀತಿ ಪಡೆದ ಒಂದು ಸರಳ ಪ್ರೇಮಕಥೆ ಸಿನಿಮಾ ಇಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಫೆಬ್ರವರಿ 8ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಎಲ್ಲ ವರ್ಗದ ಚಿತ್ರಪ್ರೇಮಿಗಳಿಗೆ ಇಷ್ಟವಾಗಿತ್ತು. ವಿನಯ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನ ಮೋಡಿ ಮಾಡಿತ್ತು. ಪ್ರೇಕ್ಷಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಮೆಚ್ಚಿದ್ದ ಒಂದು ಸರಳ ಪ್ರೇಮಕಥೆ ಬಾಕ್ಸಾಫೀಸ್ ನಲ್ಲಿಯೂ ಉತ್ತಮ ಗಳಿಕೆ ಕಂಡಿತ್ತು.
ಸುನಿ ಅವರ ಪಂಚಿಂಗ್ ಮಾತು, ಪ್ರೀತಿ, ಭಾವುಕತೆ, ಸುಮಧುರ ಗಾಯನ ಹೀಗೆ ಎಲ್ಲಾ ಆಂಗಲ್ ಗಳಿಂದಲೂ ಒಂದು ಸರಳ ಪ್ರೇಮಕಥೆ ಮನರಂಜನೆ ನೀಡಿತ್ತು.
ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.
ಒಂದೊಳ್ಳೆ ಬ್ರೇಕ್ಗಾಗಿ ಕಾಯುತ್ತಿದ್ದ ಅಣ್ಣಾವ್ರ ಮೊಮ್ಮಗನಿಗೆ ‘ಒಂದು ಸರಳ ಪ್ರೇಮಕಥೆ’ ಗೆಲುವಿನ ಟಾನಿಕ್ ನೀಡಿರುವುದು ಸುಳ್ಳಲ್ಲ. ಕಡಿಮೆ ಬಜೆಟ್ನಲ್ಲೇ ನಿರ್ಮಾಣವಾಗಿದ್ದ ಸಿನಿಮಾ ಉತ್ತಮ ಗಳಿಕೆ ಕಂಡು ಗೆಲುವಿನ ದಡ ಸೇರಿತ್ತು.
ಕರ್ನಾಟಕದಲ್ಲಿ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಓವರ್ಸೀಸ್ನಲ್ಲಿ ಸ್ಯಾಂಡಲ್ವುಡ್ ಟಾಕೀಸ್ ರೈಟ್ಸ್ ಖರೀದಿಸಿತ್ತು. ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗೂ ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿತ್ತು. ಮೈಸೂರು ರಮೇಶ್ ‘ಒಂದು ಸರಳ ಪ್ರೇಮಕಥೆ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
No Comment! Be the first one.