ಈ ಹಿಂದೆ ತುಳು ಭಾಷೆಯ ಗೋಲ್ಮಾಲ್ ಎನ್ನುವ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಮತ್ತು ಸಾಯಿಕುಮಾರ್ ಒಟ್ಟಾಗಿ ಅಭಿನಯಿಸಿದ್ದರು. ಆಗಿನ್ನೂ ಪೃಥ್ವಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಧಾರಾವಾಹಿಗಳಲ್ಲಷ್ಟೇ ಬ್ಯುಸಿಯಾಗಿದ್ದರು. ದಿಯಾ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿತ್ತು. ಇವತ್ತಿಗೆ ಪೃಥ್ವಿ ಅಂಬಾರ್ ಕನ್ನಡದ ಭರವಸೆಯ ನಟ. ಕೈತುಂಬಾ ಅವಕಾಶಗಳನ್ನು ಹೊಂದಿರುವ ಹೀರೋ. ಈ ಹೊತ್ತಿನಲ್ಲಿ ಮತ್ತೆ ಪೃಥ್ವಿ ಮತ್ತು ಸಾಯಿ ಕುಮಾರ್ ಒಂದಾಗಿ ಅಭಿನಯಿಸುತ್ತಿದ್ದಾರೆ. ಅದು ಬಹುಭಾಷೆಯ ಚೌಕಿದಾರ್…! ಯಾರೂ ಮುಟ್ಟದ ಕಥಾವಸ್ತುಗಳನ್ನು ಕೈಗೆತ್ತಿಕೊಂಡು, ಅದನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ನಿರ್ದೇಶಕ […]
ಇನ್ನು ಕನ್ನಡ ಚಿತ್ರರಂಗದ ಕಣ್ಮುಚ್ಚಿತು… ಅಂತಲೇ ಎಲ್ಲರೂ ಭಾವಿಸಿದ್ದರು. ವೃತ್ತಿಪರ ನಿರ್ಮಾಪಕರಂತೂ ಏನು ಮಾಡೋದು ಅನ್ನೋದು ಗೊತ್ತಾಗದೆ ಕೈಚೆಲ್ಲಿ ಕುಳಿತಿದ್ದರು. ಈ ಹಿಂದೆ ಕನ್ನಡ ಚಿತ್ರರಂಗ ಇಂಥದ್ದೇ ಪರಿಸ್ಥಿತಿಯಲ್ಲಿದ್ದಾಗ ಇಬ್ಬರು ಹೊಸಾ ಹೀರೋಗಳು ಬಂದು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದರು. ಆ ವರೆಗೆ ಕಾಣದ ಥೇಟರ್ ಗಳಿಕೆ ಆ ಎರಡು ಸಿನಿಮಾಗಳು ಮಾಡಿದ್ದವು. ಒಂದು ಮುಂಗಾರು ಮಳೆ, ಮತ್ತೊಂದು ದುನಿಯಾ! ಈ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಗೆ ಇಬ್ಬರು ಸೂಪರ್ ಸ್ಟಾರ್ಗಳು ಸಿಕ್ಕಿದ್ದು ಮಾತ್ರವಲ್ಲದೆ, ಕನ್ನಡ […]
ಜೈಲಲ್ಲಿ ದರ್ಶನ್ ರಾಜಾರೋಷವಾಗಿ ಒಂದು ಕೈಲಿ ಕಾಫಿ ಮಗ್ ಹಿಡಿದು, ಮತ್ತೊಂದು ಕೈಲಿ ಧಮ್ಮು ಎಳೀತಾ ಕುಂತಿರುವ ಫೋಟೋ ವೈರಲ್ ಆಗಿದೆ. ಆಗಿರೋದು ಫೋಟೋ ವೈರಲ್ ಮಾತ್ರ ಅಲ್ಲ, ಕಾರಾಗೃಹ ವ್ಯವಸ್ಥೆ ಅದೆಷ್ಟು ಹಡಾಲೆದ್ದಿದೆ ಅನ್ನೋದು ಕೂಡಾ ಅದೇ ರೇಂಜಿಗೆ ವೈರಲ್ ಆಗಿದೆ. ಈಗ ರೌಡಿಗಳ ಜಿದ್ದಾಜಿದ್ದಿ ಕೂಡಾ ದರ್ಶನ್ ಕೇಸಿಗೆ ಲಿಂಕ್ ಪಡೆದಿದೆ! ಅರುಣ್ ಕುಮಾರ್ ಜಿ. ʻಬಂಧೀಖಾನೆ ಅನ್ನೋದು ಹೆಸರಿಗಷ್ಟೇ. ಕೊಲೆಗಡುಕ, ಕ್ರಿಮಿನಲ್ಲುಗಳಿಗೆ ಅದೊಂದು ಯೂನಿವರ್ಸಿಟಿ ಇದ್ದಂಗೆ… ಕಾಸಿರೋರಿಗೆ ಅದೊಂಥರಾ ಹೋಮ್ ಸ್ಟೇ ಥರಾ…ʼ […]
ಅಬ್ಬಬ್ಬಾ… ಇವರು ನಿಜಕ್ಕೂ ಕಲಾವಿದರು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಒಂದರ ಮೇಲೊಂದು ಸುಳ್ಳುಗಳನ್ನು ಪೋಣಿಸಿ ಮುಖಕ್ಕೆ ಬಣ್ಣ ಹಚ್ಚದೇನೆ ಒಬ್ಬರಿಗಿಂತಾ ಒಬ್ಬರು ಉತ್ತಮ ಅಭಿನಯ ನೀಡಿದ್ದಾರೆ. ಕಳೆದ ವಾರ ಕಲಾವಿದರ ಸಂಘದಲ್ಲಿ ನಡೆದ ಹೋಮ, ಹವನ ಇತ್ಯಾದಿಗಳ ಬಗ್ಗೆ ಮೊದಲೇ ನಾವು ಮಾಹಿತಿ ನೀಡಿದ್ದೆವು. ಇದು ಯಾವ ಕಾರಣಕ್ಕಾಗಿ, ಯಾರಿಗಾಗಿ ನಡೆಯುತ್ತಿರುವ ಯಾಗ ಅನ್ನೋದನ್ನು ಸವಿವರವಾಗಿ ತಿಳಿಸಿದ್ದೆವು. ಈಗ ಅವೆಲ್ಲಾ ಅಕ್ಷರಶಃ ನಿಜವಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಹೋಮ ಜೈಲಲ್ಲಿರುವ ದರ್ಶನ್ ಒಳಿತಿಗಾಗಿ ಅನ್ನೋದು ನಿಜ. ನಿರ್ಮಾಪಕ […]
ಕಿಚ್ಚ ಸುದೀಪ ಅಂದರೇನೆ ಒಂದು ಗತ್ತು, ಗೈರತ್ತು. ಇವರ ಮಾತಿನ ತಾಕತ್ತು ಜಗತ್ತಿಗೇ ಗೊತ್ತು. ಇತ್ತೀಚೆಗೆ ನಮ್ಮ ಕನ್ನಡ ಚಿತ್ರರಂಗ, ಮೀಡಿಯಾದವರ ಆದಿಯಾಗಿ ಎಲ್ಲರ ಬಾಯಲ್ಲೂ ʻಕನ್ನಡ ಚಿತ್ರರಂಗ ಸೋಲುತ್ತಿದೆ. ಏನಾದರೂ ಮಾಡಿ ಗೆಲ್ಲಿಸಬೇಕುʼ ಅನ್ನೋ ಮಾತೇ ಕೇಳಿಬರುತ್ತಿದೆ. ಕಿಚ್ಚ ಸುದೀಪ ಅವರು ʼಪೆಪೆʼ ಚಿತ್ರದ ಸಮಾರಂಭದಲ್ಲಿ ಹೇಳಿದ ಮಾತನ್ನು ಕೇಳಿದರೆ ಯಾರಿಗಾದರೂ ʻಹೌದಲ್ವಾ?ʼ ಅಂತಾ ಅನ್ನಿಸದೇ ಇರೋದಿಲ್ಲ. ಕನ್ನಡ ಚಿತ್ರರಂಗಕ್ಕೆ ಭರ್ತಿ ತೊಂಭತ್ತು ವರ್ಷಗಳ ಇತಿಹಾಸವಿದೆ. ಇನ್ನು ಹತ್ತು ವರ್ಷಗಳನ್ನು ಪೂರೈಸಿದರೆ ಸ್ಯಾಂಡಲ್ವುಡ್ಗೆ ನೂರು ತುಂಬಲಿದೆ. […]
ಇಂಥದ್ದೊಂದು ಪ್ರಕರಣ ನಡೆದು ಬಹಳ ದಿನಗಳಾಗಿದ್ದವು. ಬಿಡುಗಡೆಗೂ ಮುಂಚೆ ಸಿನಿಮಾದ ಫುಟೇಜ್ ಲೀಕ್ ಆಗೋದು ಈಗ ತುಂಬಾನೇ ವಿರಳ. ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಅವರು ತಮ್ಮ ಮಗ ಸಮರ್ಜಿತ್ ಗಾಗಿ ರೂಪಿಸಿರುವ ಗೌರಿ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಅದೇನು ಯಡವಟ್ಟಾಯ್ತೋ ಏನೋ ಈ ಹೊತ್ತಲ್ಲಿ ಗೌರಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ತುಣುಕೊಂದು ಟೊರೆಂಟ್ನಲ್ಲಿ ಅಪ್ಲೋಡ್ ಆಗಿದೆ. ಕಾಕತಾಳೀಯ ಎನ್ನುವಂತೆ ಇತ್ತೀಚೆಗೆ ಭಯಾನಕ ಸುದ್ದಿಯಲ್ಲಿರುವ ದರ್ಶನ್ ಪ್ರಕರಣದ ಶೆಡ್ ಸೀನ್ ಇಲ್ಲೂ ಅನಾವರಣಗೊಂಡಿದೆ. ಈ […]
ಹಿರಿಯ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಅವರಿಗೆ ಧೀರ, ಶೂರ ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿವೆ. ನಾಯಕತ್ವ ಗುಣದ ವ್ಯಕ್ತಿ ಅಂತಾ ಒಂದಷ್ಟು ಜನ ನಂಬಿದ್ದಾರೆ. ಈಗ ಇದೇ ರಾಕ್ ಲೈನ್ ವೆಂಕಟೇಶ್ ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡವರು ʻಇವರಿಗೆಲ್ಲಾ ಏನಾಗಿದೆ?ʼ ಎಂದು ಪ್ರಶ್ನಿಸುವಂತಾಗಿದೆ. ಅರುಣ್ ಕುಮಾರ್.ಜಿ ಕನ್ನಡ ಚಿತ್ರರಂಗ ನೆಲಕಚ್ಚಿದೆ ನಿಜ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಆ ಕಾರಣಗಳನ್ನು ಗುರುತಿಸಿ, ಅದಕ್ಕೆ ತಕ್ಕ ಪರಿಹಾರ ಹುಡುಕುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು. ಅದನ್ನು ಬಿಟ್ಟು ಹೋಮ ಮಾಡಿದರೆ ಸರಿ ಹೋಗುತ್ತದೆ […]
ಈ ಸಲ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಬಂಗಾರಪ್ಪನವರ ಪುತ್ರಿ ಮತ್ತೊಮ್ಮೆ ರಾಜಕಾರಣದ ಅಖಾಡದಲ್ಲಿ ಪರೀಕ್ಷೆಗಳಿದಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು. ಹೇಗೆ ಪಾರ್ವತಮ್ಮನವರು ಡಾ. ರಾಜಕುಮಾರ್ ಅವರ ಪ್ರೇರಕ ಶಕ್ತಿಯಾಗಿದ್ದರೋ, ಹಾಗೆಯೇ ಕಳೆದ ಮೂರೂವರೆ ದಶಕಗಳಿಂದ ಶಿವರಾಜ್ ಕುಮಾರ್ ಅವರ ಬೆನ್ನಿಗೆ ನಿಂತವರು. ಆದರೆ ಈಗ ವಿಚಾರ ಅದಲ್ಲ. ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಶಿವಣ್ಣನ ಪತ್ನಿ […]
೨೦೨೩ರಲ್ಲಿ ಬಂದ ಬಹುತೇಕ ಸಿನಿಮಾಗಳು ದೊಪ್ಪದೊಪ್ಪನೆ ನೆಲಕ್ಕಪ್ಪಳಿಸಿದ್ದರಿಂದ ಕನ್ನಡ ಚಿತ್ರರಂಗ ಹೆಚ್ಚೂ ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಅಮೋಘ ಗೆಲುವು ಚಿತ್ರರಂಗ ಒಂದಿಷ್ಟು ಮಟ್ಟಕ್ಕಾದರೂ ಕಣ್ಣು ಬಿಡುವಂತಾಗಿತ್ತು. ನಂತರ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಕೂಡ ನಿರೀಕ್ಷಿಸಿದ್ದಕ್ಕಿಂತಾ ದೊಡ್ಡ ಗೆಲುವು ಕಂಡು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿನಿಮಾ ಇಂಡಸ್ಟ್ರಿಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗಬೇಕೆಂದರೆ, ದೊಡ್ಡ ಸ್ಟಾರ್ಗಳ ಸಿನಿಮಾಗಳು ಅಲ್ಲೊಂದು ಇಲ್ಲೊಂದಾದರೂ ರಿಲೀಸಾಗುತ್ತಿರಬೇಕು. ಹೊಸಬರ ಸಿನಿಮಾಗಳು ಗೆಲುವು […]